ಧರ್ಮಸ್ಥಳ ಕೇಸಲ್ಲಿ ಯೂಟ್ಯೂಬರ್ಸ್‌ಗೆ ಶಾಕ್!

ಧರ್ಮಸ್ಥಳದಲ್ಲಿ ನಿಗೂಢ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭವಾದ ಎಸ್‌ಐಟಿ ತನಿಖೆ, ಬೇರೆಯದ್ದೇ ತಿರುವು ಪಡೆದುಕೊಂಡಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯ, ತಿಮರೋಡಿ, ಮಟ್ಟಣ್ಣವರ್‌, ಜಯಂತ್ ವಿಚಾರಣೆ ಬಳಿಕ, ಅಧಿಕಾರಿಗಳು ಯೂಟ್ಯೂಬರ್‌ಗಳ ಬೆನ್ನು ಬಿದ್ದಿದ್ದಾರೆ.

ಎಂ.ಡಿ. ಸಮೀರ್‌, ಹಾಸನ ಮೂಲದ ಅಭಿಷೇಕ್‌ ಸೇರಿದಂತೆ 5ಕ್ಕೂ ಹೆಚ್ಚು ಯೂಟ್ಯೂಬರ್‌ಗಳ ವಿಚಾರಣೆ ನಡೀತಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ, ಈ ಮೊದಲೇ ಸಮೀರ್‌ನನ್ನು ವಿಚಾರಣೆ ಮಾಡಲಾಗಿತ್ತು. ಆದ್ರೆ ಧರ್ಮಸ್ಥಳ ಬುರುಡೆ ಗ್ಯಾಂಗ್‌ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ, ಎಸ್‌ಐಟಿ ಎದುರು ಸಮೀರ್‌ ಹಾಜರಾಗುತ್ತಿದ್ದಾರೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ಊಹಾಪೋಹದ ವರದಿಗಳನ್ನು ಮಾಡಿದ್ದ ಆರೋಪದಡಿ, ವಿಚಾರಣೆ ಹಾಜರಾಗುವಂತೆ ಯೂಟ್ಯೂಬರ್‌ಗಳಿಗೆ ನೋಟಿಸ್‌ ನೀಡಲಾಗಿತ್ತು. ಇಂದಿನ ವಿಚಾರಣೆಯಲ್ಲಿ ಯೂಟ್ಯೂಬರ್‌ಗಳಿಂದ ದಾಖಲೆಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಪ್ರಶ್ನಾವಳಿಗಳನ್ನು ಸಿದ್ದಮಾಡಿಕೊಂಡಿದ್ದಾರೆ. ಆರೋಪಿ ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಹೇಳಿಕೆ ಆಧರಿಸಿ ತನಿಖೆ ಮುಂದುವರೆದಿದೆ.

About The Author