ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರ್ಥಪೂರ್ಣವಾಗಿ ಗುರುಪೂರ್ಣಿಮೆಯ ಆಚರಣೆ

Dharwad News: ಧಾರವಾಡ: ಧಾರವಾಡದ ಕಮಲಾಪುರದಲ್ಲಿರುವ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಲಾಾಯಿತು.

ಪೋಷಕರು ಪಂಚೆ ಮತ್ತು ಸೀರೆಯುಟ್ಟು ಬಂದರೆ, ಮಕ್ಕಳನ್ನು ಕೂಡ ಚೆಂದವಾಗಿ ತಯಾರಿ ಮಾಡಲಾಗಿತ್ತು. ಪೋಷಕರ ಜೊತೆ ಮಕ್ಕಳನ್ನನು ಸೇರಿಸಿ, ಪೂಜೆ ಮಾಡಿಸಲಾಯಿತು. ಬಸಯ್ಯ ಹಿರೇಮಠ ಎಂಬ ಸ್ವಾಮೀಜಿ, ಪೋಷಕರಿಂದಲೇ, ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.

ಪೂಜೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳು ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಶಾಲೆಯ ಮುಖ್ಯಸ್ಥರಾದ ಸಂಗಯ್ಯ ಹಿರೇಮಠ ಅವರು ಆಯೋಜಿಸಿದ್ದರು. ತಂದೆ ತಾಯಿ ಮಗುವಿಗೆ ವಿದ್ಯಾ ಧಾರೆ ಎರೆದ ಬಳಿಕ, ಶಿಕ್ಷಕರು ಕೂಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿದರು.

About The Author