ಬೆಂಗಳೂರು: ಕ್ರೈಂ ರಿಪೋಟರ್ಸ್ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಡಿ.10 ಹಾಗೂ ಡಿ.11 ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೀಡಿಯಾ ಪ್ರೋ ಕಬಡ್ಡಿ ಚಾಂಪಿಯನ್ ಶಿಪ್ 2022 ರಲ್ಲಿ ವಿಜೇತರಾದ ಬೆಂಗಳೂರು ಮಹಿಳಾ ಪೂರ್ವ ವಿಭಾಗ ಹಾಗೂ ಪ್ರೆಸ್ ಕ್ಲಬ್ ತಂಡಕ್ಕೆ ಕ್ರೀಡಾ ಸಚಿವ ಹಾಗೂ ಕೆ.ಓ.ಕೆ.ಹಾಗೂ ಎಂ.ಎಲ್. ಸಿ .ಗೋವಿಂದ್ ರಾಜ್ ಪ್ರಶಸ್ತಿ ಪ್ರಧಾನ ಮಾಡಿದರು.
ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದ ಕ್ರೀಡಾ ಸಚಿವ ನಾರಾಯಣಗೌಡ
ಬಳಿಕ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಸಚಿವ ನಾರಾಯಣಗೌಡ ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಕ್ರೈಂ ರಿಪೋರ್ಟಸ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಖುಷಿತಂದಿದೆ. ಅಲ್ಲದೆ ಅಗ್ನಿಶಾಮಕ ಹಾಗೂ ಪೊಲೀಸ್ ತಂಡಗಳು ಭಾಗಿಯಾಗಿರುವುದು ಸಂತಸ ಇನ್ನಷ್ಟು ಹೆಚ್ಚಾಗಿದೆ. ಕೆಲಸದ ಜಂಜಾಟ ಮರೆತು ಕಬ್ಬಡಿ ಪಂದ್ಯಾವಳಿ ಭಾಗಿಯಾದ ಎಲ್ಲಾ ತಂಡಗಳಿಗೂ ಅಭಿನಂದನೆ ಸಲ್ಲಿಸಿದರು. ಈ ವೇಳೆ ಪ್ರೆಸ್ ಕ್ಲಬ್ ಅಧ್ಯಕ್ಷ.ಆರ್. ಶ್ರೀಧರ್ ,ಜನರಲ್ ಸೆಕ್ರೆಟರಿ .ಬಿ.ಪಿ.ಮಲ್ಲಪ್ಪ ಉಪಸ್ಥಿತರಿದ್ದರು.

