CM, DCM ಮಧ್ಯೆ ಮಧ್ಯಸ್ಥಿಕೆ? ಆ ಶಾಸಕನಿಗೆ ಸೂಚನೆ ಸಿಕ್ಕಿತ್ತಾ?

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ನಡುವೆ ಶಾಸಕ ಪೊನ್ನಣ್ಣ ಮಧ್ಯಸ್ಥಿಕೆ ವಹಿಸಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಯಾಕಂದ್ರೆ, ಸಿಎಂ, ಡಿಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ವೇಳೆ, ಕೇವಲ ಪೊನ್ನಣ್ಣ ಹಾಜರಿದ್ರು. ಮಧ್ಯಸ್ಥಿಕೆ ವಹಿಸುವಂತೆ ಹೈಕಮಾಂಡ್‌ ಸೂಚನೆ ಕೊಟ್ಟಿದ್ದೆಯಾ ಎಂಬ ಪ್ರಶ್ನೆ ಶುರುವಾಗಿದೆ.

ಈಗಾಗಲೇ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಬಳಿಕ ಪೊನ್ನಣ್ಣಗೆ ಹೈಕಮಾಂಡ್‌ ನಾಯಕರು ಫೋನ್‌ ಮಾಡಿದ್ದಾರಂತೆ. ಸಿದ್ದು, ಡಿಕೆ ನಡುವಿನ ಮೀಟಿಂಗ್‌ ಬಗ್ಗೆ ಮಾಹಿತಿ ಪಡೆದಿದ್ದಾರಂತೆ. ಈ ಬಗ್ಗೆ ಶಾಸಕ ಪೊನ್ನಣ್ಣ ಪ್ರತಿಕ್ರಿಯ ನೀಡಿದ್ದಾರೆ.

ನನ್ನನ್ನು ಬ್ರೇಕ್‌ಫಾಸ್ಟ್‌ಗೆ ಮಾತ್ರ ಸೇರಿಸಿಕೊಂಡಿದ್ದರು. ಅವರಿಬ್ಬರು ಪ್ರತ್ಯೇಕವಾಗಿ ಮಾತುಕತೆ ಮಾಡಿದ್ದಾರೆ. ನಿಮ್ಮಷ್ಟೇ ಮಾಹಿತಿ ಮಾತ್ರ ನನ್ನ ಬಳಿಯೂ ಇದೆ. ಜೊತೆಗಿದ್ದ ಕಾರಣಕ್ಕೆ ಫೋನ್‌ ಕೊಟ್ಟೆ ಎಂದು ಹೇಳಿದ್ದಾರೆ.

ಇನ್ನು, ಯಾರೂ ಕೂಡ ದೆಹಲಿಗೆ ಹೋಗಲ್ಲ. ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಗೆ ಹೋಗುವುದಷ್ಟೇ ಬಾಕಿ ಇದೆ. ಹೈಕಮಾಂಡ್‌ ನಾಯಕರು ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಏನೂ ಇಲ್ಲ ಎಂದು ಪೊನ್ನಣ್ಣ ಹೇಳಿದ್ರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author