ಕೋಲಾರ: ಹಳ್ಳಿಗಾಡಿನ ಬಡಜನರಿಗೆ ಆರೋಗ್ಯ ಭಾಗ್ಯ ಇಂದಿಗೂ ಕೆಲಕಡೆ ಮರೀಚಿಕೆಯಾಗಿದೆ, ಗ್ರಾಮೀಣ ಜನರಲ್ಲಿ ಶಿಕ್ಷಣದ ಕೊರತೆ ಹಾಗೂ ಹಲವಾರು ಕಾರಣಗಳಿಂದ ಅನೇಕ ರೋಗಗಳು ತಮ್ಮ ದೇಹದಲ್ಲಿದ್ದರೂ ಗುರುತಿಸಲು ಸಾದ್ಯವಾಗದ ಪರಿಸ್ಥಿತಿ ಇರುತ್ತದೆ.
ಯುವ ವೈದ್ಯರು ಗ್ರಾಮೀಣ ಭಾಗದಲ್ಲಿ ತಮ್ಮ ಸೇವೆ ಸಲ್ಲಿಸುವ ಮೂಲಕ ಹಳ್ಳಿ ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ, ಈ ನಿಟ್ಟಿನಲ್ಲಿ ಯುವ ವೈದ್ಯರಾದ ಡಾ ಕಿರಣ್ ಸೋಮಣ್ಣ ಮುಂದಾಗಿದ್ದಾರೆ .
ಗ್ರಾಮೀಣ ಜನರ ಆರೋಗ್ಯ ತಪಾಸಣೆಗಾಗಿ ಯುವ ವೈದ್ಯರ ತಂಡದ ಮೂಲಕ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ಡಾ. ಕಿರಣ್ ಸೋಮಣ್ಣ ಅವರ ನೇತೃತ್ವದಲ್ಲಿ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು ಶಾಸಕ ನಂಜೇಗೌಡರು ಚಾಲನೆ ನೀಡಿದರು, ಕೋಲಾರದ ಮಾಸ್ತಿ ಭಾಗದಲ್ಲಿ ಸಾಕಷ್ಟು ಜನ ಬಡವರು ಇರುವ ಕಾರಣ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ಬೆಳಗ್ಗೆ 9 ಗಂಟೆಗೆ ಆರಂಭವಾದ ಆರೋಗ್ಯ ಶಿಬಿರದಲ್ಲಿ ಸಾಕಷ್ಟು ಮಂದಿ ಭಾಗವಹಿಸಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಕಿರಣ್ ಸೋಮಣ್ಣ ಈ ಭಾಗದಲ್ಲಿ ಸಾಕಷ್ಟು ಬಡವರು ಕೂಲಿ ಕಾರ್ಮಿಕರು ಇರುವ ಕಾರಣ ಇಲ್ಲಿ ಹೆಲ್ತ್ ಕ್ಯಾಂಪನ್ನು ಆಯೋಜನೆ ಮಾಡಲಾಗಿದೆ, ಆರೋಗ್ಯ ಸೇವೆಯನ್ನು ಜನಗಳಿಗೆ ತಲುಪಿಸುವುದೇ ನಮ್ಮ ಉದ್ದೇಶವಾಗಿದೆ. ಹೃದಯ ಸಮಸ್ಯೆ ಇರುವವರಿಗೆ, ಕಣ್ಣಿನ ಸಮಸ್ಯೆ ಇರುವವರಿಗೆ ಹಾಗೂ ಬಿಪಿ ಶುಗರ್ ಸಮಸ್ಯೆ ಇರುವವರಿಗೆ ಪ್ರತ್ಯೇಕವಾಗಿಯೇ 14 ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಅವರ ಆರೋಗ್ಯ ಸಮಸ್ಯೆಗಳಿಗೆ ತಕ್ಕಂತೆ ವೈದ್ಯರು ತಪಾಸಣೆ ನಡೆಸಿದ್ದಾರೆ. 40ವರ್ಷ ಮೇಲ್ಪಟ್ಟವರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಎಕೋ ಸ್ಕ್ಯಾನ್ ಸಹ ಮಾಡಲಾಗಿದೆ. ಆರೋಗ್ಯ ಶಿಬಿರಕ್ಕೆ ಬಂದ ಎಲ್ಲಾ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ಸಹ ನೀಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇದ್ದರೆ ಮಾತ್ರ ಸಮಾಜದಲ್ಲಿ ಬಲಿಷ್ಠರಾಗಿ ಇರುವುದಕ್ಕೆ ಸಾಧ್ಯ ಇದೇ ಕಾರಣಕ್ಕೆ ನಮ್ಮ ಯುವ ವೈದ್ಯರ ತಂಡದಿಂದ ಆರೋಗ್ಯ ಶಿಬಿರ ಯಶಸ್ವಿಯಾಗಿದೆ ಇಂತಹ ಶಿಬಿರಗಳನ್ನು ಇನ್ನಷ್ಟು ಆಯೋಜಿಸುವ ಅಭಿಲಾಷೆ ಯನ್ನು ವ್ಯಕ್ತ ಪಡಿಸಿದ್ದಾರೆ.
ಬೈಟ್ – ಕಿರಣ್ ಸೋಮಣ್ಣ – ವೈದ್ಯರು.