Monday, December 23, 2024

Latest Posts

Megha Shetty : ಆಪರೇಷನ್ ಲಂಡನ್ ಕೆಫೆ ಚಿತ್ರೀಕರಣ ಮುಗಿಸಿದ ಖುಷಿಯಲ್ಲಿ ಮೇಘಾ ಶೆಟ್ಟಿ!

- Advertisement -

Film News : ಈ ವರ್ಷ ತೆರೆ ಕಾಣುತ್ತಿರುವ ಚಿತ್ರಗಳ ಪೈಕಿ ಅತೀ ಹೆಚ್ಚು ಕುತೂಹಲ ಮೂಡಿಸುತ್ತಿರುವ ಆಕ್ಷನ್ ಪ್ಯಾಕೇಜ್ ಚಿತ್ರ ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ ಮರಾಠಿ ಹಿಂದಿ ತೆಲುಗು ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ ‘ಆಪರೇಷನ್ ಲಂಡನ್ ಕೆಫೆ’ ಬಹುತೇಕ ಚಿತ್ರೀಕರಣ ಮುಗಿಸಿದ್ದು. ಚಿತ್ರದ ಡಬ್ಬಿಂಗ್ ಹಂತದ ಚಟುವಟಿಕೆಗಳು ಭರದಿಂದ ಸಾಗುತ್ತಿದೆ.

ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿಸಿರುವ ನಟಿ ಮೇಘಾ ಶೆಟ್ಟಿ ಅದೇ ಖುಷಿಯಲ್ಲಿ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಲಾಂಛನದಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ. ಡಿ ನಾಗಾರ್ಜುನ್ ಛಾಯಾಗ್ರಹಣ ಪ್ರಾನ್ಷು ಝಾ ಸಂಗೀತ ಕೆ. ಎಂ ಪ್ರಕಾಶ್ ಸಂಕಲನ ವರದರಾಜ್ ಕಾಮತ್ ಕಲೆ ವಿಕ್ರಂ ಮೋರ್ ಮಾಸ್ ಮಾದ ಸಾಹಸ ಕವಿರಾಜ್ ವಿ ನಾಗೇಂದ್ರ ಪ್ರಸಾದ್ ಮತ್ತು ಕ್ಷಿತಿಜ್ ಪಟವರ್ಧನ್ ಸಾಹಿತ್ಯವಿರುವ ಈ ಚಿತ್ರದಲ್ಲಿ ಮರಾಠಿಯ ಹೆಸರಾಂತ ಶಿವಾನಿ ಸುರ್ವೆ, ವಿರಾಟ್ ಮಡಕೆ ಸಹಿತ ಅರ್ಜುನ್ ಕಾಪಿಕ್ಕಾಡ್ ಬಿ ಸುರೇಶ್ ಇನ್ನಿತರ ಹೆಸರಾಂತ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಸದ್ಯದಲ್ಲೇ ಚಿತ್ರಕ್ಕೆ ಸಂಬಂಧಿಸಿದ ಇನ್ನಷ್ಟೂ ಸಿಹಿ ಸುದ್ಧಿಯನ್ನು ಹಂಚಿಕೊಳ್ಳುವುದಾಗಿ ಹೇಳಿಕೊಂಡ ನಿರ್ದೇಶಕ ಸಡಗರ ರಾಘವೇಂದ್ರ ಈ ಮೂಲಕ ಹುಟ್ಟುಹಬ್ಬದ ಖುಷಿಯನ್ನು ಆಚರಿಸಿಕೊಳ್ಳುತ್ತಿರುವ ಮೇಘಾ ಶೆಟ್ಟಿಯವರಿಗೆ ಇಡೀ ಚಿತ್ರತಂಡದ ಪರವಾಗಿ ಶುಭಾಶಯವನ್ನು ಕೋರಿದ್ದಾರೆ.

Harshika Bhuvan : ಆಗಸ್ಟ್ 24ಕ್ಕೆ ಹರ್ಷಿಕಾ -ಭುವನ್ ವಿವಾಹ : ಕಾರ್ಡ್​ ಕೊಡೋದ್ರಲ್ಲಿ ಬ್ಯುಸಿಯಾದ ಜೋಡಿ..!

Rashmika Mandanna : ಸೀಕ್ರೆಟ್ ಮದುವೆ ವಿಚಾರ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ…!

Sai Pallavi : ಆಧ್ಯಾತ್ಮದೆಡೆ ಸಾಯಿ ಪಲ್ಲವಿ ಚಿತ್ತ..?!

 

- Advertisement -

Latest Posts

Don't Miss