Monday, June 23, 2025

Latest Posts

ಎರಡನೇ ಮದುವೆ ಆಗ್ತಾರಾ ಮೇಘನಾರಾಜ್..?!

- Advertisement -

film news update:

ನಟಿ  ಮೇಘನಾ ರಾಜ್ ಹಾಗು ಜಿರಂಜೀವಿ ಸರ್ಜಾ ಸತತ 10 ವರ್ಷ ಪ್ರೀತಿಯಲ್ಲಿದ್ದು ನಂತರ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹ ವಾಗಿದ್ದರು  ಆದರೆ ಸುಂದರ ಸಂಸಾರದಲ್ಲಿ ವಿಧಿ ವಿಕೃತ ಆಟವಾಡಿತ್ತು. ಇನ್ನೇನು ಮಗುವೊಂದು ಎಂಟ್ರಿ ಆಗಿ ಸುಖ ಸಂಸಾರದಲ್ಲಿ ದಂಪತಿ ಸಂತೋಷವಾಗಿರಬಹುದು ಎನ್ನುವಾಗಲೇ ಚಿರಂಜೀವಿ ಸರ್ಜಾನನ್ನ ಭಗವಂತ ತನ್ನತ್ತ ಕರೆದುಕೊಂಡು  ಬಿಟ್ಟಿದ್ದ. 6 ತಿಂಗಳ ಗರ್ಭೀಣಿ ಮೇಘನಾ ಬಾಳಲ್ಲಿ ತುಂಬಲಾರದ ನಷ್ಟ ಇದಾಗಿದೆ.

 ಮದುವೆ  ಆದ ಎರಡೇ ವರ್ಷಕ್ಕೆ ತನ್ನ ಬಾಳ  ಸಂಗಾತಿಯನ್ನು ಕಳೆದುಕೊಂಡ  ಮೇಘನಾರಾಜ್ ನಿಧಾನಕ್ಕೆ ತನ್ನ ಬಾಳಿನ ಪಯಣವನ್ನು ಬದಲಿಸುತ್ತಿದ್ದಾರೆ ಪ್ರತಿಷ್ಠಿತ ಚಾನೆಲ್ ಒಂದರಲ್ಲಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿರುವ ಮೇಘನಾ ವಿದೇಶಕ್ಕೂ ಹಾರುವ ಸುದ್ದಿ ಹರಿದಾಡಿತ್ತು ಜೊತೆಗೆ ಇದೀಗ ಎರಡನೇ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ ಮೇಘನಾ. ಎರಡನೇ ಮದುವೆ ಆಗುತ್ತಾರಾ? ಎಂಬ ಪ್ರಶ್ನೆಗೆ ಮೇಘನಾ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ

 ‘ನಾನಿನ್ನೂ ಆ ಬಗ್ಗೆ ಯೋಚಿಸಿಲ್ಲ’ ಮೇಘನಾ 2ನೇ ಮದುವೆ ಬಗ್ಗೆ ನೀಡಿದ ಸಂದರ್ಶದ ಬಗ್ಗೆ ಈಗಾಗಲೇ ಸುದ್ದಿ ಬಿತ್ತರವಾಗಿದೆ. ಬಾಲಿವುಡ್ ಶಾದೀಶ್.ಕಾಮ್‌ನಲ್ಲಿಯೂ ಈ ಸುದ್ದಿಯಲ್ಲಿ ಪ್ರಕಟಿಸಿದೆ. ಇದರಲ್ಲಿ ಮೇಘನಾ ಎರಡನೇ ಮದುವೆ ಬಗ್ಗೆ ಇನ್ನೂ ಯೋಚಿಲ್ಲ ಎಂದು ಹೇಳಿದ್ದಾರೆ. ” ನಾಳೆ ಹೇಗಿರುತ್ತೆ ಎಂದು ನಾನು ಯೋಚಿಸುವುದಿಲ್ಲ.

 2ನೇ ಮದುವೆ ಬಗ್ಗೆ ಮೇಘನಾ ಹೇಳುವುದೇನು? ಮೇಘನಾ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲ ಸೃಷ್ಟಿಸಿದೆ. ಇತ್ತೀಚೆಗೆ ಬಾಲಿವುಡ್ ಬಬಲ್ ಅನ್ನೋ ವೆಬ್‌ ಸೈಟ್‌ಗೆ ಮೇಘನಾ ಎರಡನೇ ಮದುವೆ ರಿಯಾಕ್ಷನ್ ಕೊಟ್ಟಿದ್ದು, “ತನ್ನ ಸುತ್ತ ಇರುವ ಅದೆಷ್ಟೋ ಜನರು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿದ್ದುಕೊಂಡು ಮಗ ರಾಯನ್‌ ಅನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಎರಡನ್ನೂ ಹೇಳುವ ಜನರೂ ಇದ್ದಾರೆ.” ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಮೇಘನಾ ಹೇಳಿಕೆ ವೈರಲ್ ಮೇಘನಾ ರಾಜ್ ಬಾಲಿವುಡ್ ಮಾಧ್ಯಮಗಳಿಗೆ ನೀಡಿದ್ದಾರೆ ಎನ್ನಲಾದ ಹೇಳಿಕೆ ವೈರಲ್ ಆಗುತ್ತಿದೆ. ಆದರೆ, 2ನೇ ಮದುವೆ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು ಮೇಘನಾ ಎಂದಿಗೂ ಕನ್ನಡ ಮಾಧ್ಯಮಗಳೊಂದಿಗೆ ಹಂಚಿಕೊಂಡಿಲ್ಲ. ಸದ್ಯ ಮೇಘನಾ ಎರಡನೇ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ವೈರಲ್ ಆಗುತ್ತಿದೆ.

ಡಿವೋರ್ಸ್ ಪಡೆಯಲು ಮುಂದಾಗಿದ್ದಾರಾ ಪ್ರಿಯಾಮಣಿ..?! ನಟಿ ಹೇಳಿದ್ದೇನು..?!

 

ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಫೋಟೋ ಹಂಚಿ ಮಕ್ಕಳನ್ನು ಪರಿಚಯಿಸಿದ ಅಮೂಲ್ಯ ಜಗದೀಶ್ : ‘ಸೋ ಕ್ಯೂಟ್’ ಎಂದ ಅಭಿಮಾನಿಗಳು

- Advertisement -

Latest Posts

Don't Miss