ಅಪ್ಪ ಅಂದ್ರೆ ಆಕಾಶ. ಅಪ್ಪ ಪ್ರೀತಿಯನ್ನು ಎಂದು ಬಣ್ಣಿಸಲಾಗದು. ಜನ್ಮನೀಡಿದ ಜನ್ಮದಾತನ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ಭಾವನ್ಮಾತಕ ಸಾಲುಗಳೊಂದಿಗೆ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ವೊಂದನ್ನು ಮಾಡಿರುವ ಮೇಘನಾ, ಪ್ರೀತಿಯ ಅಪ್ಪಾ… ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು. ನಿಮ್ಮ ಜನ್ಮದಿನದಂದು ನಾನು ಈ ವಿಷಯವನ್ನು ಇಡೀ ಜಗತ್ತಿಗೆ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ. ಲವ್ ಯೂ ಅಪ್ಪಾ ಎಂದು ಬರೆದುಕೊಂಡು ತಂದೆಯ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ನಟ ಸುಂದರ್ ರಾಜ್ ನಿನ್ನೆ 69ನೇ ವರ್ಷದ ಹುಟ್ಟುಹಬ್ಬವನ್ನು ನಿನ್ನೆ ಆಚರಿಸಿಕೊಂಡಿದ್ದಾರೆ. ಹೀಗಾಗಿ ಮೇಘನಾ ಅಪ್ಪನ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಅಂದಹಾಗೇ ಮೇಘನಾ ಅಪ್ಪನ ಮುದ್ದಿನ ಮಗಳು. ಮೇಘನಾರ ಪ್ರತಿ ಹಂತದಲ್ಲೂ ಕೈ ಹಿಡಿದು ನಡೆಸಿದವರು ಸುಂದರ್ ರಾಜ್. ಕನ್ನಡದ ಚಿತ್ರರಂಗದಲ್ಲಿ ಎಲ್ಲಾ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಕಲಾ ದೇವಿಯನ್ನು ಆರಾಧಿಸುತ್ತಿರುವ ಕುಟುಂಬ ಸುಂದರ್ ರಾಜ್ ಅವರದ್ದು.
