Tuesday, October 14, 2025

Latest Posts

ಚಿರು ಹುಟ್ಟುಹಬ್ಬದಂದು ಮೇಘನಾಳ Surprise..!

- Advertisement -

www.karnatakatv.net: ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದು ಮೇಘನಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಹೌದು..ಮೇಘನಾ ರಾಜ್ ಪತಿಯನ್ನು ಕಳೆದುಕೊಂಡ ನಂತರ ಬೇಸರದಿಂದಿದ್ದಾಗ ರಾಯನ್ ನ ಜನನ ವಾಯಿತು, ಅವನ ಆರೈಕೆಯಲ್ಲಿ ಬ್ಯುಸಿ ಆಗಿದ್ದ ಮೇಘನಾ ಈಗ ಒಂದು ಸಣ್ಣ ಗ್ಯಾಪ್ ನ ನಂತರ ಮೇಘನಾ ರಾಜ್ ಮತ್ತೆ ಸಿನಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಪನ್ನಗಾಭರಣ, ನಿರ್ದೇಶಕ ವಿಶಾಲ್ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮುಂತಾದ ವರು ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡಬೇಕೆಂಬ ಹಂಬಲವಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈಗ ಈ ಚಿತ್ರ ಇಂದು ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬದಂದೇ ಆರಂಭವಾಗುತ್ತಿದೆ.

ಚಿತ್ರದಲ್ಲಿ ಮೇಘನಾರಾಜ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಮೇಘನಾ ಮತ್ತೆ ನಟನೆಗೆ ಮರಳಿದಂತಾಗುತ್ತದೆ. ಚಿತ್ರದ ಟೈಟಲ್, ಫಸ್ಟ್ಲುಕ್ ಸೇರಿದಂತೆ ಇತರ ಅಂಶಗಳು ಶೀಘ್ರದಲ್ಲಿ ಬಿಡುಗಡೆಯಾಗಲಿವೆ.

- Advertisement -

Latest Posts

Don't Miss