Friday, November 22, 2024

Latest Posts

Mekedatu ಪಾದಯಾತ್ರೆ ಮೋಟಕು ಗೊಳಿಸಿದ ಕಾಂಗ್ರೆಸ್..!

- Advertisement -

ನಿನ್ನೆ ಪಾದಯಾತ್ರೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ವಿಭಾಗೀಯ ಪೀಠ(High divisional seat)ವಿಚಾರಣೆ ನಡೆಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಜನ ಕೊರೋನಾದಿಂದ ತತ್ತರಿಸಿದ್ದಾರೆ, ಈ ಸಮಯದಲ್ಲಿ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ?, ಅನುಮತಿ ನೀಡಲಿಲ್ಲ ವೆಂದರೆ ಇನ್ನು ಏಕೆ ಕ್ರಮ ಕೈಗೊಂಡಿಲ್ಲ?, ಸರ್ಕಾರ ಸಮರ್ಥವಾಗಿದೆಯೇ?, ನಾವು ಹೇಳುವವರಿಗೆ ನೀವು ಕ್ರಮಕೈಗೊಳ್ಳುತ್ತಿಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಎಚ್ಚೆತ್ತ ಗೃಹಮಂತ್ರಿ ಅರಗ ಜ್ಞಾನೇಂದ್ರ(Araga Jnanendra) ಅಧಿಕಾರಿಗಳ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದರು. ಕಾಂಗ್ರೆಸ್ (Congress) ನಿನ್ನೆ ಹೈಕೋರ್ಟ್ ನೋಟಿಸ್(Notice) ಜಾರಿ ಮಾಡಿದ್ದರೂ ಸಹ ಇಂದು ಪಾದಯಾತ್ರೆಗೆ ಮುಂದಾಗಿತ್ತು. ಸರ್ಕಾರದ ಆದೇಶದಂತೆ ಇಂದು ಎಸ್ ಪಿ ಗಿರೀಶ್(sp girish) ಹಾಗೂ ಐಜಿ ಲೋಕೇಶ್ ರವರು ಪೊಲೀಸರ ಜೊತೆ ರಾಮನಗರಕ್ಕೆ(RAMANAGARA) ಭೇಟಿ ನೀಡಿ ಸಿದ್ದರಾಮಯ್ಯ(Siddaramaiah) ಜೊತೆ ಮಾತುಕತೆ ನಡೆಸಿದರು. ಆದರೆ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ನಾವು ಮಾಡೇ ಮಾಡುತ್ತೇವೆ ಎಂದು ಹೇಳಿದ್ದರು. ಇದರಿಂದ ಐಜೂರು ಸರ್ಕಲ್ ಬಳಿ ಪೊಲೀಸರು ಬ್ಯಾರಿಕೇಡ್(police barricade)ಗಳನ್ನು ಸಹ ಹಾಕಿ ಪಾದಯಾತ್ರೆಯನ್ನು ತಡೆಯಲು ಸಿದ್ಧರಾದರು. ನಂತರ ಪಾದಯಾತ್ರೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್(KPCC President D K Sivakumar)ರಾಹುಲ್ ಗಾಂಧಿಯವರಿಗೆ ಮಾಹಿತಿಯನ್ನು ನೀಡಿದರು. ರಾಹುಲ್ ಗಾಂಧಿ(Rahul Gandhi)ಯವರು ಪಕ್ಷಕ್ಕೆ ಮುಜುಗರವಾಗದಂತೆ ನಿರ್ಧಾರ ತೆಗೆದುಕೊಳ್ಳಿ ಎಂದು ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದ್ದರು. ನಂತರ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಕೈಗೊಳ್ಳಲಾಯಿತು. ನಂತರ ಹೈಕಮಾಂಡ್ ನಿಂದ ರಣದೀಪ್ ಸುರ್ಜೆವಾಲಾ(Randeep Surjewala) ಮುಖಾಂತರ ಪಾದಯಾತ್ರೆಯನ್ನು ಮುಕ್ತಗೊಳಿಸುವಂತೆ ರಾಹುಲ್ ಗಾಂಧಿ ತಿಳಿಸಿದ್ದಾರೆ. ಅದಕ್ಕೆ ಕೆಲವರು ವಿರೋಧವನ್ನು ಸಹ ವ್ಯಕ್ತಪಡಿಸಿದ್ದರು. ಇದೇ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೋನಾ ಪಾಸಿಟಿವ್(Corona Positive)ಬಂದಿರುವುದು ತಿಳಿದುಬಂದಿದೆ , ಅವರು ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಕೊರೋನಾ ಬಂದಿರುವ ಶಂಕೆಯೂ ಸಹ ವ್ಯಕ್ತವಾಗಿದೆ. ಎಸ್ಎಂ ಕೃಷ್ಣ ಅವರು ಸಹ ಪಾದಯಾತ್ರೆಯನ್ನು ನಿಲ್ಲಿಸುವಂತೆ ಡಿಕೆ ಶಿವಕುಮಾರ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಇದೇ ವೇಳೆ ಯುಟಿ ಖಾದರ್(U. T. Khader) ಕೂಡ ಪಾದಯಾತ್ರೆ ನಿಲ್ಲಿಸುವಂತೆ ಹೇಳಿದರು. ಈ ಎಲ್ಲಾ ಬೆಳವಣಿಗೆಯ ನಂತರ ಪಾದಯಾತ್ರೆಯನ್ನು ನಿಲ್ಲಿಸಲಾಗಿದೆ.

- Advertisement -

Latest Posts

Don't Miss