Sunday, July 6, 2025

Latest Posts

ಕಂದಕಕ್ಕೆ ಉರುಳಿದ ಮಿನಿ ಬಸ್…!

- Advertisement -

National News:

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಕಿಕ್ಕಿರಿದು ತುಂಬಿದ್ದ ಮಿನಿಬಸ್‌ವೊಂದು ಆಳವಾದ ಕಂದಕಕ್ಕೆ ಉರುಳಿ ಹತ್ತು ಜನರು ಸಾವನ್ನಪ್ಪಿದ್ದು, ೨೮ ಮಂದಿ ಗಾಯಗೊಂಡಿದ್ದಾರೆ.ಬಸ್ ಗಾಲಿ ಮೈದಾನದಿಂದ ಪೂಂಚ್‌ಗೆ ತೆರಳುತ್ತಿದ್ದಾಗ ಬೆಳಗ್ಗೆ ೮.೩೦ರ ಸುಮಾರಿಗೆ ಸಾವ್ಜಿಯಾನ್‌ನ ಗಡಿ ಬೆಲ್ಟ್‌ನ ಬ್ರಾರಿ ನಲ್ಲಾಹ್‌ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆ, ಪೊಲೀಸರು ಮತ್ತು ಸ್ಥಳೀಯ ಗ್ರಾಮಸ್ಥರು ಜಂಟಿ ರಕ್ಷಣಾ ಕರ‍್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿದ್ದರು. ಒಂಬತ್ತು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ೨೮ ಮಂದಿಯಲ್ಲಿ ಒಂಬತ್ತು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು  ತಿಳಿದು ಬಂದಿದೆ.

ಬೆಂಗಳೂರು: ಹಿಂದಿ ದಿವಸ್ ದಿನಾಚರಣೆ ವಿರೋಧಿಸಿ ಜೆಡಿಎಸ್ ನಾಯಕರ ಪ್ರತಿಭಟನೆ

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ

ಸಾರಿಗೆ ನೌಕರರ ನಿರಂತರ ಆತ್ಮಹತ್ಯೆ ಹಿನ್ನಲೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಪ್ರತಿಭಟನೆ

- Advertisement -

Latest Posts

Don't Miss