ಹುಣಸೂರು: ತಾಲೂಕಿನ ಹೈರಿಗೆ ಗ್ರಾಮದ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿರುವ ಬೃಹತ್ ಕಲ್ಲುಬಂಡೆಗಳನ್ನ ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಹಾಡುಹಗಲೇ ರಾಜಾರೋಷವಾಗಿ ಜೆಸಿಬಿ ಗಳಿಂದ ಕಲ್ಲುಬಂಡೆಗಳನ್ನ ಸಾಗಿಸಲು ಯತ್ನಿಸಿದ ಖದೀಮರು ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹುಣಸೂರು ತಾಲೂಕು ಹೈರಿಗೆ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಭಾರಿ ಗಾತ್ರದ ಕಲ್ಲುಬಂಡೆಗಳ ಮೇಲೆ ಖದೀಮರ ಕಣ್ಣು ಬಿದ್ದಿದೆ.ಕಳೆದ ನಾಲ್ಕು ದಿನಗಳಿಂದ ಕ್ವಾರಿ ಕೆಲಸ ಮಾಡಿ ಕಲ್ಲು ಬಂಡೆಗಳನ್ನ ಸೀಳಿದ್ದಾರೆ.
ಗಣಿ ಇಲಾಖೆಯಿಂದಾಗಲಿ ಅಥವಾ ತಾಲೂಕು ಕಚೇರಿಯಿಂದಾಗಲಿ ಯಾವುದೇ ಅನುಮತಿ ಪಡೆಯದೆ ಕ್ವಾರಿ ಕೆಲಸ ನಡೆಸುತ್ತಿದ್ದಾರೆ.ಅಕ್ರಮವಾಗಿ ಕಲ್ಲುಬಂಡೆಗಳನ್ನ ಸಾಗಿಸುತ್ತಿರುವುದನ್ನ ಮನಗಂಡ ಸ್ಥಳೀಯರು ಕಾಮಗಾರಿಗೆ ಅಡ್ಡಪಡಿಸಿಗ್ರಾಮ ಲೆಕ್ಕಿಗ ಮೂರ್ತಿಕುಮಾರ್ ಗೆ ಕರೆಮಾಡಿ ಸ್ಥಳಕ್ಕೆ ಕರೆಸಿ ಪ್ರಶ್ನಿಸಿದಾಗ ಮೂರ್ತಿಕುಮಾರ್ ಅಕ್ರಮ ಎಂದು ತಿಳಿಸಿದ್ದಾರೆ.ಗ್ರಾಮಲೆಕ್ಕಿಗ ಮೂರ್ತಿ ಕುಮಾರ್ ರವರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ..
School wall fell down :ಸತತ ಮಳೆಗೆ ಶಾಲೆ ಗೋಡೆ ಕುಸಿತ ತಪ್ಪಿದ ಭಾರಿ ಅನಾಹುತ


