ಸಚಿವ ಬಿ.ಸಿ ಪಾಟೀಲ್ ಅವರಿಂದ ಮುಂಗಾರು ಹಂಗಾಮಿನ ಬೆಳೆ ವಿಮೆ ಸಪ್ತಾಹಕ್ಕೆ ಚಾಲನೆ

ಹಾವೇರಿ: “ನನ್ನ ಬೆಳೆ ನನ್ನ ಹಕ್ಕು ” ಎಂಬುದನ್ನು ಅನ್ನದಾತ ಎಂದಿಗೂ ಮರೆಯಬಾರದು. ತನ್ನ ಹಕ್ಕನ್ನು ಪಡೆಯಲು ಕಡ್ಡಾಯವಾಗಿ ರೈತ ಮೊಬೈಲ್ ಬೆಳೆ ಆ್ಯಪ್ ಸಮೀಕ್ಷೆಯನ್ನು ಖುದ್ದು ಸ್ವತಃ ತಾನೇ ಮಾಡಿ ಅಪ್ಲೋಡ್‌ಮಾಡುವ ಮಾಡುವ ಮೂಲಕ ತನ್ನ ಜಮೀನಿನ ವಿವರ ಬೆಳೆ ವಿವರ ಎಲ್ಲಾ ಮಾಹಿತಿಯನ್ನು ಸ್ವತಃ ತಾನೇ ಹೊಂದಬೇಕು ಎಂದು ಸಚಿವ ಬಿ.ಸಿ ಪಾಟೀಲ್ ಕರೆ ನೀಡಿದರು.

ಮತಕ್ಷೇತ್ರ ಹಿರೆಕೆರೂರಿನಲ್ಲಿ ಪ್ರಧಾನ ಮಂತ್ರಿ‌‌ಫಸಲ್ ಬೀಮಾ‌ಯೋಜನೆಯಡಿ ಮುಂಗಾರು ಹಂಗಾಮಿನ ಬೆಳೆ‌ ವಿಮೆ‌ಸಪ್ತಾಹ-2022-23 ಕ್ಕೆ ಕೃಷಿ ಇಲಾಖಾಧಿಕಾರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಚಾಲನೆ‌ ನೀಡಿ ಬಿಸಿಪಿ ಮಾತನಾಡಿದರು.

ಮೊಬೈಲ್‌ ಬೆಳೆ ಸಮೀಕ್ಷೆ ಇಡೀ‌‌ ದೇಶವೇ ಕರ್ನಾಟಕದತ್ತ ಮುಖ ಮಾಡುವಂತೆ ಮಾಡಿದ್ದು,ಕೇಂದ್ರ ಸರ್ಕಾರ ಕಳೆದ ಬಾರಿ ಕರ್ನಾಟಕದ ಕೃಷಿ ಇಲಾಖೆಯನ್ನು ಶ್ಲಾಘಿಸಿ ಈ ಮೊಬೈಲ್ ಆ್ಯಪ್ ಬೆಳೆ ಸಮೀಕ್ಷೆ ಮಾದರಿಯನ್ನು ಇತರೆ ರಾಜ್ಯಗಳಿಗೂ ಅನ್ವಯಿಸಲು ಮುಂದಾಗಿದೆ.ಆರಂಭದಲ್ಲಿ‌ ‌ಈ ಸಮೀಕ್ಷೆಗೆ ದೊರೆತಂತಹ ಪ್ರತಿಕ್ರಿಯೆ ಸಾಧನೆ ಈ ಬಾರಿಯೂ ಆಗಬೇಕು.ಕಂದಾಯ ತೋಟಗಾರಿಕೆ‌ಸೇರಿದಂತೆ ಕೃಷಿ‌‌ ಇಲಾಖೆಯ ಅಧಿಕಾರಿಗಳು‌ ರೈತರೇ ಬೆಳೆ ಸಮೀಕ್ಷೆಯನ್ನು ಮಾಡಿ ವಿವರವನ್ನು ಮೊಬೈಲ್ ಆ್ಯಪ್‌ನಲ್ಲಿ‌ ದಾಖಲಿಸುವಂತೆ ಪ್ರೇರಿಸಬೇಕು.ಇದು ಆ‌ಇಲಾಖೆ ಇಲಾಖೆ ಕೆಲಸ ಎನ್ನದೇ ರೈತರ ಕೆಲಸ ಎಂಬುದನ್ನು ಅರಿತು ಈ‌ಬಾರಿಯೂ ಇದರಲ್ಲಿ‌ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜುಲೈ 1ರಿಂದ 7ರವರೆಗೆ ಬೆಳೆ ವಿಮೆ‌ಸಪ್ತಾಹ ನಡೆಯಲಿದ್ದು,ಇದೂವರೆಗೂ ಹಾವೇರಿ ಜಿಲ್ಲೆಯಲ್ಲಿ 27130 ರೈತರು ಬೆಳೆ ವಿಮೆ‌‌ ನೋಂದಣಿ ಮಾಡಿದ್ದು,ರಾಜ್ಯಾದ್ಯಂತ 3.30 ಲಕ್ಷ ರೈತರು ನೋಂದಣಿ ಮಾಡಿರುವುದಾಗಿ ಬಿ.ಸಿ.ಪಾಟೀಲ್ ತಿಳಿಸಿದರು.

ಈ ಸಂದರ್ಭದಲ್ಲಿ ಬೆಳೆ ವಿಮೆ ಮತ್ತು ಬೆಳೆ‌ಸಮೀಕ್ಷೆ ಕುರಿತಾದ ಹಸ್ತಪ್ರತಿ,ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

About The Author