Dharwad News: ಧಾರವಾಡ: ಧಾರವಾಡದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಕೆಂಪೆಗೌಡ ಜಯಂತಿಯಲ್ಲಿ ಸ್ವಾಮಿಜಿಯೊಬ್ಬರು ಸಿಎಂ ಬದಲಾವಣೆ ವಿಚಾರ ಪ್ರಸ್ತಾಪ ಹಿನ್ನಲೆ, ಸ್ವಾಮಜಿ ಅವರು ಹೇಳಿಕೆ ಅವರ ಅಭಿಪ್ರಾಯ. ಹೈಕಮಾಂಡ ನಿರ್ಧಾರ ಮಾಡುತ್ತೆ. ಎರಡು ವರ್ಷಕ್ಕೆ ಒಂದೂವರೆ ವರ್ಷಕ್ಕೆ ಎಂಬುದರ ಬಗ್ಗೆ ಹೈಕಮಾಂಡ ವೇದಿಕೆಯಲ್ಲಿ ನಿರ್ಣಯವಾಗುತ್ತೆ. ಯಾವ ಶಾಸಕರು ಹೇಳಿಕೆ ಕೊಟ್ಟರು ಅವರ ವಿಚಾರ ಅದು. ರಾಜ್ಯದಲ್ಲಿ 136 ಶಾಸಕರು ಇದ್ದಾರೆ. ಯಾವ ಸಮಯದಲ್ಲಿ ಯಾರು ಸಿಎಂ ಮಂತ್ರಿ ಆಗಬೇಕು ಆ ಸಮಯದಲ್ಲಿ ಎಲ್ಲವೂ ಆಗುತ್ತೆ ಎಂದು ಹೇಳಿದ್ದಾರೆ.
ಸಿಎಂ ಡಿಸಿಎಂ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಚಲುವರಾಯಸ್ವಾಮಿ, ಕರ್ನಾಟಕದ ಸಮಸ್ಯಗಳ ಬಗ್ಗೆ ಮಾತನಾಡಲಿಕ್ಕೆ ಹೋಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ಬಗ್ಗೆ ಚರ್ಚೆ ಮಾಡಲು ಹೋಗಿದ್ದಾರೆ. ಯಾವುದೆ ಸರಕಾರ ಅಧಿಕಾರಕ್ಕೆ ಬಂದರೂ ಮೂರು ವರ್ಷಕ್ಕೆ ನಾಲ್ಕು ವರ್ಷಕ್ಕೆ ಬೆಲೆ ಏರಿಕೆ ಆಗುತ್ತೆ. ನಾವು ಉಳಿದ ರಾಜ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಏರಿಕೆ ಮಾಡಿದ್ದೆವೆ.
ಚನ್ನಪಟ್ಟಣ ಕ್ಷೆತ್ರದ ಉಪ ಚುಣಾವಣೆ ವಿಚಾರದ ಬಗ್ಗೆ ಮಾತನಾಡಿ, ಕುಮಾರಸ್ವಾಮಿ ಅವರು ಸ್ಪರ್ದೆ ಮಾಡಿದ್ದರು, ಸದ್ಯ ನಾವು ಅಭ್ಯರ್ಥಿಯ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಚನ್ನಪಟ್ಟಣ ಕ್ಷೆತ್ರದ ಆಗು ಹೋಗುಗಳ ಬಗ್ಗೆ ಸಿಎಂ ಡಿಸಿಎಂ ಚರ್ಚೆ ಮಾಡುತ್ತೆವೆ ಎಂದು ಧಾರವಾಡದಲ್ಲಿ ಸಚಿವರು ಹೇಳಿದ್ದಾರೆ.
Bengaluru Airport : ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ?: ತಮಿಳುನಾಡು ಮಹತ್ವದ ನಿರ್ಧಾರ



