ಮಂಡ್ಯ: ನಗರದಲ್ಲಿ ದಕ್ಷಿಣ ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದರೂ, ಈ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಕಾಲೇಜುಗಳಲ್ಲಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಸಭೆ ನಡೆಸಿ, ಪ್ರಚಾರ ಭಾಷಣ ಕೂಡ ಮಾಡಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಇದೀಗ ಎಫ್ಐಆರ್ ದಾಖಲಿಸಲಾಗಿದೆ.
ಈಗಾಗಲೇ ಈ ಸಂಬಂಧ ಸಿಇಓ ಸಚಿವ ಅಶ್ವತ್ಥನಾರಾಯಣ ಅವರು ಚುನಾವಣಾ ನೀತಿ ಸಂಹಿತ ಉಲ್ಲಂಘಿಸಿ, ಸಭೆ, ಪ್ರಚಾರವನ್ನು ಹಲವು ಕಾಲೇಜುಗಳಲ್ಲಿ ನಡೆಸಿದ್ದರ ಬಗ್ಗೆ ಜಿಲ್ಲಾಧಿಕಾರಿಗಳಿ ಅವರ ವಿರುದ್ಧ ಕ್ರಮಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯ ಹಿನ್ನಲೆಯಲ್ಲಿ ಮಂಡ್ಯ ಡಿಸಿ ಕಾನೂನು ಕ್ರಮವನ್ನು ಸಚಿವರ ವಿರುದ್ಧ ಕೈಗೊಳ್ಳುತ್ತಾರೆ ಎನ್ನಲಾಗಿತ್ತು.
ಈ ಮಧ್ಯೆ ಮಂಡ್ಯ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗಳಿಗೆ ಸಚಿವರು ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಸಭೆ, ಪ್ರಚಾರ ನಡೆಸಿದ್ದರ ಬಗ್ಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ವಿರುದ್ಧ ಈಗ ಎಫ್ಐಆರ್ ದಾಖಲಾಗಿದೆ.




