ಮೈಶುಗರ್ ಪುನರಾರಂಭ: ಅಧಿಕಾರಿಗಳ ಜೊತೆಗೆ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಸಭೆ

ಮಂಡ್ಯ: ಜಿಲ್ಲೆಯ ರೈತರ ಜೀವನಾಡಿ ಮೈ ಶುಗರ್ ಸಕ್ಕರೆ ಕಾರ್ಖಾನೆ ಪುನಾರಂಭ ಕುರಿತು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಂಜೆ ಅಧಿಕಾರಿಗಳ ಸಭೆಯ ನಡೆಯಿತು ‌

ಕಾರ್ಖಾನೆ ಪುನಾರಂಭ ಕ್ಕೆ ಸರ್ಕಾರ ಈಗಾಗಲೇ ನಿರ್ಧರಿಸಿ ಯಂತ್ರೋಪಕರಣಗಳ‌ ದುರಸ್ತಿಗೆ ಬಜೆಟ್ ನಲ್ಲಿ 50 ಕೋಟಿ ರೂ ಘೋಷಿಸಿದೆ‌, ಶತಾಯ ಗತಾಯ ಈ ವರ್ಷ ಕಾರ್ಖಾನೆಯನ್ನು ಸರ್ಕಾರ ಆರಂಭಿಸಲಿದೆ ಎಂದು ಸಚಿವರು ಈ ವೇಳೆ‌ ತಿಳಿಸಿದರು.

ನಂತರ ಸಚಿವರು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳು ಕಾರ್ಖಾನೆ ಪುನಾರಂಭ ಕುರಿತು ಕೈ ಗೊಂಡಿರುವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹೋಬಳಿವಾರು ಸಭೆಗಳನ್ನು ನಡೆಸಿ ರೈತರಿಗೆ ಮಾಹಿತಿ ನೀಡುವಂತೆ ತಾಕೀತು ಮಾಡಿದರು.

ಇದಕ್ಕೂ ಮುನ್ನ ಸಚಿವ ಗೋಪಾಲಯ್ಯ ಮತ್ತು ರೇಷ್ಮೆಖಾತೆ ಸಚಿವ ಕೆ.ಸಿ.ನಾರಾಯಣ ‌ಗೌಡ ಅವರು, ಕಾರ್ಖಾನೆಗೆ ಭೇಟಿ ನೀಡಿ ಯಂತ್ರೋಪಕರಣಗಳನ್ನು ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ ಅಶ್ವತಿ ,ಉಪ‌ವಿಭಾಗಾಧಿಕಾರಿ ಶಿವಾನಂದ ಮೂರ್ತಿ, ಕಾರ್ಖಾನೆ ಆಡಳಿತ ಮಂಡಳಿ‌ ನಿರ್ದೇಶಕರು ಉಪಸ್ಥಿತರಿದ್ದರು.

About The Author