ಕಾಂಗ್ರೆಸ್ ಹೈಕಮಾಂಡ್ ಹೇಳಿದ್ರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಅಂತಾ, ಸಚಿವ ಕೃಷ್ಣಬೈರೇಗೌಡ ಕೆಲ ದಿನಗಳ ಹಿಂದೆ ಹೇಳಿದ್ರು. ಬಳಿಕ ಹಲವು ಸಚಿವರುಗಳು ತಾವೂ ಕೂಡ ಅಂಥಾ ಸಮಯ ಬಂದ್ರೆ ಮಂತ್ರಿಗಿರಿ ಬಿಟ್ಟುಕೊಡುವುದಾಗಿ ಬಹಿರಂಗವಾಗೇ ಹೇಳಿಕೆ ಕೊಟ್ಟಿದ್ರು. ಇದೀಗ ಸಿದ್ದು ಆಪ್ತ ಸಂತೋಷ್ ಲಾಡ್ ಅವರ ಸರದಿ.
ಜಾತಿಗಣತಿಗೆ ಇಡೀ ಸಚಿವ ಸಂಪುಟ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ, ಸಿದ್ದು ಜೊತೆ ನಿಂತಿದ್ದು ಬೆರಳೆಣಿಕೆಯಷ್ಟು ಸಚಿವರು. ಅದರಲ್ಲಿ ಸಂತೋಷ್ ಲಾಡ್ ಮೊದಲ ಸ್ಥಾನದಲ್ಲಿ ನಿಲ್ತಾರೆ. ಇದೀಗ ಸಂತೋಷ್ ಲ್ಯಾಡ್ ಸಚಿವ ಸ್ಥಾನ ತ್ಯಾಗದ ಮಾತನಾಡಿದ್ದು, ಸಿದ್ದು ಸೇಫ್ ಗಾರ್ಡ್ ಮಾಡಲು ಮುಂದಾಗಿದ್ದಾರೆ.
ಸಚಿವರೆಲ್ಲರೂ ತ್ಯಾಗಕ್ಕೆ ಸಿದ್ಧವಾಗಿ ಇರಬೇಕೆಂದು ಸಹ ಸಚಿವರಿಗೆ ಕರೆ ಕೊಟ್ಟಿದ್ದಾರೆ. ತ್ಯಾಗ ಮಾಡುವುದಕ್ಕೆ ಯಾವಾಗಲೂ ರೆಡಿಯಾಗಿ ಇರಬೇಕು. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ನಾವೆಲ್ಲರೂ ರೆಡಿ ಇದ್ದೇವೆ. ನೀವು ಹೊರಗೆ ಹೋಗಬೇಕೆಂದು ಹೋಗುತ್ತೇವೆ. ಎಲ್ಲವನ್ನೂ ಸ್ವೀಕರಿಸುತ್ತೇವೆ. ಈ ಹಿಂದೆ ಸರ್ಕಾರ ರಚನೆ ವೇಳೆ ನಾವು ಅಲ್ಲಿ ಇರಲಿಲ್ಲ. ಆ ರೀತಿಯ ಕಂಡೀಷನ್ಸ್ ಬಗ್ಗೆ ನನಗೆ ಗೊತ್ತಿಲ್ಲ.
ಬಿಜೆಪಿಯವರು ಕ್ರಾಂತಿ ಕ್ರಾಂತಿ ಅಂತಾರೆ. ಹಾಗಿದ್ರೆ ಕ್ರಾಂತಿ ಎಂದರೇನು? ಕೇಂದ್ರ ಸರ್ಕಾರದ ಖಜಾನೆ ಬಗ್ಗೆ ಕೇಳಿ. ಎಲ್‌ಐಸಿ ದುಡ್ಡು ಎಲ್ಲಿ ಹೋಗಿದೆ ಕೇಳಿ. ಪ್ರಧಾನಿಯವ್ರು ಯಾವುದೇ ದೇಶಕ್ಕೆ ಹೋದ್ರೂ, ಆ ದೇಶದ ಗುತ್ತಿಗೆಗಳು ಎರಡ್ಮೂರು ತಿಂಗಳಲ್ಲಿ ಅದಾನಿಗೆ ಸಿಗುತ್ತಿದೆ. ಆ ಬಗ್ಗೆ ಅವರನ್ನು ಕೇಳಿ.
ಬಿಹಾರ ಎಲೆಕ್ಷನ್ ಕೂಡ ರಾಜ್ಯ ಕಾಂಗ್ರೆಸ್ ಮೇಲೆ ಪರಿಣಾಮ ಬೀಳಲಿದೆ. ಒಳ್ಳೆಯ ಎಲೆಕ್ಷನ್ ಆದ್ರೆ ಬಿಜೆಪಿಯವ್ರು ಎಲ್ಲಾ ಕಡೆ ಸೋಲ್ತಾರೆ. ಜನರಿಗೆ ಸುಳ್ಳು ಹೇಳಿ ವೋಟ್ ಹಾಕಿಸಿಕೊಳ್ತಾರೆ. ಪ್ರಗತಿಪರ ಬಿಜೆಪಿ ಆಗಿದ್ರೆ 10 ಸಾವಿರ ರೂಪಾಯಿ ಕೊಡುವ ಅಗತ್ಯವಿತ್ತಾ. ಈ ಆಧಾರದಲ್ಲೇ ಬಿಜೆಪಿ ಗೆಲ್ಲುತ್ತಿದೆ.
ಒಟ್ನಲ್ಲಿ, ನಾಯಕತ್ವ ಬದಲಾವಣೆ ಬಗ್ಗೆ ಮತ್ತು ರೀಶಫಲ್ ಬಗ್ಗೆ ಹೈಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆಂದು ಸಂತೋಷ್ ಲಾಡ್ ಹೇಳಿದ್ದಾರೆ.

