Political News: ಸಿಎಂ ಅಧಿಕಾರ ಹಂಚಿಕೆ ಬಗ್ಗೆ ಒಪ್ಪಂದವಾಗಿದೆ ಅನ್ನೋ ರೀತಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಈ ಹೇಳಿಕೆಗೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದು, ಅಂಥಾದ್ದೇನಿಲ್ಲ. ಸಿಎಂ ಹಂಚಿಕೆ ಒಪ್ಪಂದವಾಗಿದ್ದಲ್ಲಿ, ಅವರಿಬ್ಬರೇ ರಾಜ್ಯದಲ್ಲಿ ರಾಜಕೀಯ ನಡೆಸಲಿ, ನಾವೆಲ್ಲ ಯಾಕೆ..? ಎಂದು ಪ್ರಶ್ನಿಸಿದ್ದರು. ಅಲ್ಲದೇ, ಇದೆಲ್ಲ ಸುಳ್ಳು, ಡಿಕೆಶಿ ಯಾವ ಅರ್ಥದಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದಿದ್ದರು.
ಆದರೆ ಇಂದು ಸಚಿವ ಮುನಿಯಪ್ಪ ಈ ಬಗ್ಗೆ ಹೇಳಿಕೆ ನೀಡಿದ್ದು. ಡಿಕೆಶಿ ಹೇಳಿದ್ದು ನಿಜ ಅನ್ನುವ ರೀತಿ ಹೇಳಿದ್ದಾರೆ. ಸಚಿವ ಮುನಿಯಪ್ಪ ಕಾಂಗ್ರೆಸ್‌ನ ಹಿರಿಯ ರಾಜಕಾರಣಿಯಾಗಿದ್ದು, 7 ಬಾರಿ ಸಂಸದರಾಗಿದ್ದವರು. ಅಂಥವರು ಡಿಕೆಶಿ ಹೇಳಿದ್ದು ಸತ್ಯ ಎಂದಿದ್ದಾರೆ ಎಂದಮೇಲೆ ಡಿಕೆಶಿ ಹೇಳಿದ ಮಾತು ನಿಜಕ್ಕೂ ಸತ್ಯವಿರಬೇಕು ಎಂದು ಹಲವರು ಅಂದಾಜಿಸಿದ್ದಾರೆ.
ಪರಮೇಶ್ವರ್ ಹೇಳಿದ್ದೇನು..?
ಸಿಎಂ ಹುದ್ದೆ ಒಪ್ಪಂದದ ಬಗ್ಗೆ ಪರಮೇಶ್ವರ್ ಮಾತನಾಡಿದ್ದು, ಹೈಕಮಾಂಡ್ ನಿರ್ಧಾರಕ್ಕೆ ನಾವು ತಲೆ ಬಾಗುತ್ತೇವೆ. ಹೈಕಮಾಂಡ್ ಬಿಟ್ಟು ನಾವು ಹೋಗುವುದಿಲ್ಲ. ಒಪ್ಪಂದ ಆಗಿದ್ದೇ ಆದಲ್ಲಿ, ಬೇರೆ ನಾಯಕರ ಅವಶ್ಯಕತೆ ಇಲ್ಲವೇ..? ನಾನು ಈ ಬಗ್ಗೆ ಹೈಕಮಾಂಡ್‌ನಲ್ಲಿ ಕೇಳಿದ್ದೇನೆ. ಅಲ್ಲಿ ಯಾರೂ ರಾಜ್ಯದಲ್ಲಿ ಸಿಎಂ ಸ್ಥಾನದ ಬಗ್ಗೆ ಒಪ್ಪಿಗೆಯಾಗಿದೆ ಎಂದು ಹೇಳಲಿಲ್ಲ. ಡಿಕೆಶಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಯಾವ ಒಪ್ಪಿಗೆಯೂ ಆಗಿಲ್ಲವೆಂದು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.