ಸಚಿವ ಮುರುಗೇಶ್ ನಿರಾಣಿ, ಎಂಟಿಬಿ ನಾಗರಾಜ್ ತೆರಳಬೇಕಿದ್ದ ಹೆಲಿಕ್ಯಾಪ್ಟರ್ ನಲ್ಲಿ ತಾಂತ್ರಿಕ ದೋಷ, ಪೈಲೆಟ್ ಸಮಯ ಪ್ರಜ್ಞೆಗೆ ತಪ್ಪಿದ ಅನಾಹುತ

ಬೆಂಗಳೂರು: ಮೈಸೂರಿಗೆ ವಿವಿಧ ಕಾರ್ಯಕ್ರಮ ನಿಮಿತ್ತ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ನಲ್ಲಿ ಸಚಿವ ಮುರುಗೇಶ್ ನಿರಾಣಿ ಹಾಗೂ ಎಂ.ಟಿ.ಬಿ ನಾಗರಾಜ್ ತೆರಳಬೇಕಿತ್ತು. ಆದ್ರೇ ತಾಂತ್ರಿಕ ದೋಷದ ಕಾರಣ, ಮುಂದಾಗಬೇಕಿದ್ದಂತ ಭಾರೀ ಅನಾಹುತವೊಂದು ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದಂತೆ ಆಗಿದೆ.

ಸಚಿವ ಮುರುಗೇಶ್ ನಿರಾಣಿ ಹಾಗೂ ಎಂಟಿಬಿ ನಾಗರಾಜ್ ನಿಗದಿಯಂತೆ ವಿವಿಧ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ತೆರಳಲು ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಏರೋದಕ್ಕೆ ತೆರಳಿದ್ದರು. ಈ ವೇಳೆ ಹೆಲಿಕ್ಯಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೂಡಲೇ ಪೈಲೆಟ್ ಗಮನಕ್ಕೆ ತಂದರು.

ಈ ಹಿನ್ನಲೆಯಲ್ಲಿ, ಹೆಲಿಕ್ಯಾಪ್ಟರ್ ಬಿಟ್ಟು, ಏರ್ಪೋರ್ಟ್ ನಿಂದ ವಾಪಾಸ್ ಆದಂತ ಅವರು ರಸ್ತೆ ಮಾರ್ಗದ ಮೂಲಕ ಮೈಸೂರಿಗೆ ತೆರಳುವಂತೆ ಆಯ್ತು.

About The Author