ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗುಡುಗಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ-ಸಂಸ್ಥೆಗಳು ಕಾರ್ಯಕ್ರಮ ಮಾಡಲು, ಅನುಮತಿ ನೀಡಬೇಕಂದ್ರೆ, ಮೊದಲು ವಾತಾವರಣ ಸರಿ ಇರಬೇಕು. ಕಾನೂನು ಸುವ್ಯವಸ್ಥೆ ಕಾಪಾಡೋದು ಸರ್ಕಾರದ ಜವಾಬ್ದಾರಿ. ಅನುಮತಿ ಕೇಳುವ ವಿಚಾರದಲ್ಲಿ ಸಂಘರ್ಷ ಇದ್ರೆ ಪರ್ಮಿಷನ್ ಕೊಡೋದಕ್ಕೆ ಅಗಲ್ಲ.
ಆರ್‌ಎಸ್‌ಎಸ್‌ನವರು ಮೊದಲು ಶಾಂತಿಯುತವಾದ ವಾತಾವರಣ ನಿರ್ಮಾಣ ಮಾಡಲಿ. ನಾನೆಲ್ಲೂ ಆರ್‌ಎಸ್‌ಎಸ್ ಬ್ಯಾನ್ ಮಾಡಿ ಎಂದು ಹೇಳಿಯೇ ಇಲ್ಲ. ಕೆಲವು ಚಟುವಟಿಕೆಗಳು ಸಾರ್ವಜನಿಕರ ವ್ಯಾಪ್ತಿಯಲ್ಲಿ ನಡೆಯಬಾರದು. ಸರ್ಕಾರದ ಆವರಣದಲ್ಲಿ ನಡೆಯಬಾರದು. ನಾನು ಹೇಳಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ಬೆಂಗಳೂರಿನಲ್ಲಿ ಈಗಾಗಲೇ ಇದ್ದ ನಿಯಮವೇ ಇಡೀ ರಾಜ್ಯ ವ್ಯಾಪ್ತಿಯಲ್ಲಿ ಬಂದಿದೆ ಅಷ್ಟೆ.
ಬಿಜೆಪಿಯವರಿಗೆ ಕಾನೂನಿನ ಅರಿವೇ ಇಲ್ಲ. ಅರಿವು ಇದ್ದಿದ್ರೆ ಇಷ್ಟೊತ್ತಿಗಾಗಲೇ ಪಥಸಂಚಲನ ನಡೆಯಬೇಕಿತ್ತು. ನಿನ್ನೆ ನಡೆದಂತಹ ಶಾಂತಿ ಸಭೆಯಲ್ಲಿ ಎಲ್ಲವೂ ರೆಕಾರ್ಡ್ ಆಗಿದೆ. ಅದನ್ನು ಕೋರ್ಟ್‌ಗೆ ನೀಡಲಿ. ವಾತಾವರಣ ಚೆನ್ನಾಗಿದ್ರೆ ಅನುಮತಿ ಕೊಡ್ತಾರೆ. ಇಲ್ಲಾಂದ್ರೆ ಕೊಡಲ್ಲ. ಅದರ ಬದಲಾಗಿ ಬಿಜೆಪಿಯವರೇಗೆ ಡಿಸೈಡ್ ಮಾಡ್ತಾರೆ. ನವೆಂಬರ್ 2 ಆಯ್ತು. ಬಳಿಕ ನವೆಂಬರ್ 10 ಅಂದ್ರು. ಈಗ 20ಕ್ಕೆ ಬಂದಿದೆ. ಏನ್ ಮಾಡ್ತಾರೆ ನೋಡೋಣ.
ವಿರೋಧ ಪಕ್ಷದ ಮೇಲ್ಮನೆ ನಾಯಕರು ನನ್ನನ್ನೇ ನಾಯಿ ಅಂತಾರೆ. ಅವರಿಗೆ ನಮ್ಮ ಕ್ಷೇತ್ರಕ್ಕೆ ಬರ್ತಾರೆ ಅವರಿಗೆ ಸನ್ಮಾನ ಮಾಡ್ಬೇಕಂತೆ. ತುಘಲಕ್ ದರ್ಬಾರ್ ಎಂದು ಅವರೇ ಹೇಳ್ತಾರೆ. ಚಿತ್ತಾಪುರ, ಕಲಬುರಗಿ ವಾತಾವರಣ ಕೆಡಿಸುವುದಕ್ಕೆ ಬರ್ತಿದ್ದಾರೆ. ಇಲ್ಲಿಯವರಿಗೆ ಬಿಜೆಪಿ ನಾಯಕರು ಎಷ್ಟು ಬಾರಿ ಕಲಬುರಗಿಗೆ ಬಂದಿದ್ದಾರೆ. ಬೆಳೆ ಹಾನಿಯಾದಾಗ ರೈತರ ಕಣ್ಣೀರು ಒರೆಸುವುದಕ್ಕೆ ಬಂದಿಲ್ಲ. ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಿಭಟನೆ ಮಾಡೋದಕ್ಕೆ 4 ಬಾರಿ ಬಂದಿದ್ದಾರೆ. ಬಂದಾಗೆಲ್ಲಾ ಅವರಿಗೇ ಮುಖಭಂಗ ಆಗಿದೆ. ಹೀಗಂತ ಬೆಂಗಳೂರಿನಲ್ಲಿ ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

