Friday, May 17, 2024

Latest Posts

‘ಒಂದು ರಾಷ್ಟ್ರೀಯ ಪಕ್ಷ ತಮ್ಮ ನಾಯಕನನ್ನು ಆಯ್ಕೆ ಮಾಡದೇ ಇರೋದು ವಿಪರ್ಯಾಸ’

- Advertisement -

Hassan News: ಹಾಸನ: ಗೃಹ ಲಕ್ಷ್ಮಿ ಯೋಜನೆ ಮಹಿಳೆಯರಿಗೆ ಭ್ರಮನಿರಸನ ಅಂತಾ ಬೊಮ್ಮಯಿ ಹೇಳಿಕೆ ಹಿನ್ನೆಲೆ, ಹಾಸನದಲ್ಲಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಹೇಳೋದನ್ನ ಯಾಕೆ ಕೇಳ್ತೀರಾ..? ಅವರು ಮಾಜಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಹೇಳೋದನ್ನ ಕೇಳಿ. ಬಸವರಾಜ್ ಬೊಮ್ಮಾಯಿ, ಬಿಜೆಪಿ ಪಾರ್ಟಿಯಲ್ಲಿ ವಿರೋಧ ಪಕ್ಷದ ನಾಯಕರನ್ನ ಮಾಡಿಕೊಳ್ಳೋದಕ್ಕೆ. ಯೋಗ್ಯತೆ ಇಲ್ಲದೇ ಇರೋ‌ ಪಕ್ಷದವರು ಹೇಳಿದ್ದನ್ನೇ ಹೇಳ್ತೀರಾ ನೀವು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೇಲ್ಮನೆ ಹಾಗೂ ಕೆಳಮನೆಯಲ್ಲಿ, ಒಂದು ರಾಷ್ಟ್ರೀಯ ಪಕ್ಷ ಇದ್ದು, ಆ ಪಕ್ಷದ ನಾಯಕರನ್ನ ಆಯ್ಕೆ ಮಾಡದೇ ಇರುವಂತಹದ್ದು ವಿಪರ್ಯಾಸ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೆ.ಎನ್.ರಾಜಣ್ಣ ವ್ಯಂಗ್ಯವಾಡಿದ್ದಾರೆ..

ವಿರೋಧ ನಾಯಕ ಬಿಜೆಪಿ ವಿಳಂಬ ವಿಚಾರದ ಬಗ್ಗೆ ರಾಜಣ್ಣ ಪ್ರತಿಕ್ರಿಯಿಸಿದ್ದು, ಯಾಕೆ ಆಗಿಲ್ಲ ಅಂತಾ ಅವರ ಪಕ್ಷದವರನ್ನೇ ಕೇಳಬೇಕು, ನನಗೆ ಕೇಳಿದ್ರೆ ನನಗೆ ಗೊತ್ತಾ..? ನಮ್ಮ ಅಬ್ಸರ್ವೇಶನ್ ಏನು ಅಂದ್ರೆ ಆಂತಕರಿಕ ಗೊಂದಲನೂ ಇದೆ. ಅವರೆಲ್ಲಾ ಹೇಳ್ತಾರಲ್ಲ, ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಅಂತಾ. ನಾವು ಬಿಜೆಪಿ ಮುಕ್ತ ಭಾರತ ಮಾಡ್ತೀವಿ ಅಂತಾ ಹೇಳೊದಿಲ್ಲ. ಅದು ಒಡೆದ ಮನೆ, ಗೊಂದಲ ಇದೆ. ಎಷ್ಟು‌ ದಿನ ಆಯ್ತು ಅಸೆಂಬ್ಲಿ ಶುರುವಾಗಿ, ಚುನಾವಣೆ ಮುಗಿದು ಎರಡು ತಿಂಗಳು ಆಗ್ತಾ ಬಂತು.  ಇದುವರೆಗೂ ಒಂದು ರಾಷ್ಟ್ರೀಯ ಪಕ್ಷ ತೀರ್ಮಾನ ಮಾಡಿಕೊಳ್ಳಲಿಲ್ಲ ಅಂದ್ರೆ, ಅವರಲ್ಲಿ ಗೊಂದಲನೂ ಇದೆ, ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಮುಂದೆ ಭವಿಷ್ಯನೂ ಇಲ್ಲ ಎಂದು ರಾಜಣ್ಣ ಕಿಡಿಕಾರಿದ್ದಾರೆ.

ನಬಾರ್ಡ್ ಮೂಲಕ ರಾಗಿ ಕೊಂಡುಕೊಂಡಿದ್ದ ಹಣ ಸರ್ಕಾರದಿಂದ ಇನ್ನೂ ರೈತರಿಗೆ ಬಂದಿಲ್ಲ ಎಂಬ ವಿಚಾರದ ಬಗ್ಗೆ ರಾಜಣ್ಣ ಪ್ರತಿಕ್ರಿಯಿಸಿದ್ದು, ನಮ್ಮ ಸರ್ಕಾರ ರೈತರ ಪರವಾಗಿರುತ್ತೆ, ಅದರಲ್ಲಿ ಅನುಮಾನ ಇಟ್ಕೊಳ್ಳಬೇಡಿ. ರೈತರ ರಾಗಿಗೂ ದುಡ್ಡುಕೊಡ್ತೇವೆ, ಇನ್ನೂ ಅವರದ್ದೆಲ್ಲಾ ಏನೇನೂ ಯೋಗಕ್ಷೇಮ, ಕಷ್ಟಸುಖಗಳಿಗೆ ಅವಕ್ಕೆಲ್ಲಾ ನಮ್ಮ ಸರ್ಕಾರ ಸ್ಪಂದಿಸುತ್ತದೆ. ರಾಗಿಯ ಪೆಮೇಂಟ್ ನಲ್ಲಿ ಗೊಂದಲ, ನಿಧಾನ ಆಗಿದ್ರೆ ಅದನ್ನು ಕೊಡಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ವಿಚಾರದ ಬಗ್ಗೆ ಸಚಿವ ಕೆ.ಎನ್.ರಾಜಣ್ಣ ಮಾತನಾಡಿದ್ದು,  ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಆಗಿರೋದು ಎಲ್ಲಾ ಜಿಲ್ಲೆಗಳಿಂದಲೂ ವರದಿಯಾಗಿದೆ. ನಾವು ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಸಭೆ ಮಾಡಿದ್ದೀವಿ. ಮಳೆ ಎಷ್ಟು ಬರಬೇಕಿತ್ತು, ಬಾರದೇ ಇದ್ದರೆ ಏನೆಲ್ಲಾ ಅನಾನುಕೂಲಗಳಾಗಿತ್ತವೆ, ಆ ಅನಾನೂಕಲಗಳನ್ನ ನಿವಾರಣೆ ಮಾಡೋದಕ್ಕೆ ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಬೇಕು, ಅದಕ್ಕೆ ಎಷ್ಟು ಹಣಕಾಸಿನ ಅಗತ್ಯತೆ ಇದೆ ಎಂಬ ಎಲ್ಲವನ್ನೂ, ಈಗಾಗಲೇ ಎಲ್ಲಾ ಮಾಹಿತಿಯನ್ನು ಕ್ಯಾಬಿನೆಟ್ ಸಬ್ ಕಮಿಟಿ ತೆಗೆದುಕೊಂಡಿದೆ ಎಂದು ರಾಜಣ್ಣ ಹೇಳಿದ್ದಾರೆ.

ಕೃಷ್ಣಬೈರೇಗೌಡ್ರು ಅಧ್ಯಕ್ಷರಾಗಿದ್ದಾರೆ, ನಾನು ಅದರ ಸದಸ್ಯ ಇದ್ದೇನೆ. ನಾವು ಈಗಾಗಲೇ ಪ್ಲಾನ್ ಎ, ಪ್ಲಾನ್ ಬಿ ಅಂತಾ ತಯಾರು ಮಾಡಿದ್ದೇವೆ. ರೈತರಿಗಾಗಲಿ, ಸಾರ್ವಜನಿಕರಿಗಾಗಲೀ, ಜಾನುವಾರುಗಳಿಗಾಗಲೀ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದೇವೆ. ನಮ್ಮ‌ಸರ್ಕಾರದ‌‌ ಆಧ್ಯತೆ ಇರುವು ಐದು ಗ್ಯಾರಂಟಿಗಳನ್ನ ನಾವು ಜಾರಿ ಮಾಡಬೇಕು. ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಐದು ಗ್ಯಾರಂಟಿಗಳನ್ನ ನಾವು ಕೊಟ್ಟಿದ್ದೇವೆ, ಅದನ್ನ ಜಾರಿ‌ ಮಾಡುವುದು ಮೊದಲ ಆದ್ಯತೆ. ಅದರ ನಂತರ ಬೇರೆ ಆಧ್ಯತೆಗಳನ್ನ ಮುಂದಿನ ದಿನಗಳಲ್ಲಿ ಮಾಡ್ತೇವೆ ಎಂದು ಸಚಿವರು ಹೇಳಿದ್ದಾರೆ.

ಇನ್ನು ಎಂಪಿ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ,   ಜೆಡಿಎಸ್ ಪಕ್ಷ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಅಲೆಯನ್ಸ್ ಮಾಡಿಕೊಂಡಿತ್ತು. ಆಗೆಲ್ಲಾ ಏನಾಯ್ತು ರಿಸಲ್ಟ್.. ಹೌದಲ್ವಾ… ಈಗಲೂ ಕೂಡಾ ಅಲೆಯನ್ಸ್ ಆದ್ರೆ ಲೀಡರ್ ಗಳು ಅಲೆಯನ್ಸ್ ಆಗಬಹುದು. ಆದ್ರೆ ವೋಟರ್ಸ್ ಅಲೆಯನ್ಸ್ ಆಗೋದಿಲ್ಲ. ನನ್ನ ಅನುಭವದ ಮೇಲೆ ಹೇಳುವಂತಹ ಮಾತಿದು ಎಂದು ಹೇಳಿದ್ದಾರೆ.

ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು..?

ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ

- Advertisement -

Latest Posts

Don't Miss