- Advertisement -
ಆರೋಗ್ಯ ಸಚಿವ ಶ್ರೀರಾಮುಲು ಸಂಚಾರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರು ಸಿಕ್ಕಸಿಕ್ಕಲ್ಲಿ ವಾಹನ ಸವಾರರನ್ನು ಹಿಡೀತಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಪೊಲೀಸರಿಂದ ತೊಂದರೆ ಆಗ್ತಿದೆ ಅಂತ ರಾಮುಲು ಆರೋಪಿಸಿದ್ರು.
ಇತ್ತೀಚೆಗೆ ಸಂಚಾರಿ ಪೊಲೀಸರ ಹಾವಳಿ ಜಾಸ್ತಿಯಾಗಿದೆ
ಬಡವರು, ಮಧ್ಯಮ ವರ್ಗದವರು ಸ್ಕೂಟರ್ ಗಳಲ್ಲಿ ಓಡಾಡ್ತಾರೆ. ಒಂದು ಸರ್ಕಲ್ ದಾಟಿ ಮತ್ತೊಂದು ಸರ್ಕಲ್ ಗೆ ಹೊಗುವಷ್ಟರಲ್ಲಿ ಅಲ್ಲೂ ಇರ್ತಾರೆ ಪೊಲೀಸ್ರು. ಸಂಚಾರಿ ಪೊಲೀಸರಿಂದ ಜನ ನೋವು ಅನುಭವಿಸ್ತಿದಾರೆ. ಇದರ ಬಗ್ಗೆ ನಾನು ಸಿಎಂ, ಹೋಂ ಮಿನಿಸ್ಟರ್ ಜತೆ ಮಾತಾಡ್ತೀನಿ ಅಂತ ರಾಮುಲು ಹೇಳಿದ್ರು.
ನಾನೂ ಸಾರ್ವಜನಿಕ ಜೀವನದಲ್ಲಿರೋನು. ಜನ ಅನುಭವಿಸುವ ಕಷ್ಟ ನನಗೂ ಗೊತ್ತು ಅಂತ ಟ್ರಾಫಿಕ್ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.
- Advertisement -