Sunday, September 15, 2024

Latest Posts

‘ನಾನು ಶಾಸಕನಾಗಬೇಕಿತ್ತು ಅದಕ್ಕೆ ಬಿಜೆಪಿ ಬಿಟ್ಟು ಬಂದೆ’- ಸಚಿವ ಸಾ.ರಾ ಮಹೇಶ್

- Advertisement -

ಬೆಂಗಳೂರು: ನಾನು ಬಿಜೆಪಿಗೆ ಯಾವುದೇ ಅನ್ಯಾಯ ಮಾಡಿಲ್ಲ, ಬಿಜೆಪಿ ಕೂಡ ನನಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದ್ರೆ ನಾನು ಶಾಸಕನಾಗಬೇಕೆಂಬ ಉದ್ದೇಶದಿಂದ ಜೆಡಿಎಸ್ ಸೇರ್ಪಡೆಗೊಂಡೆ ಅಂತ ಸಚಿವ ಸಾ.ರಾ ಮಹೇಶ್ ಸದನದಲ್ಲಿ ಹೇಳಿದ್ದಾರೆ.

ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಶಾಸಕರ ಕುರಿತು ಮಾತನಾಡಿದ ಸಚಿವ ಸಾ.ರಾ ಮಹೇಶ್, ನಮ್ಮ ಜೊತೆ ಇಲ್ಲದವರು ನಿಮ್ಮ ಜೊತೆಗೆ ಎಷ್ಟು ದಿನ ಇರುತ್ತಾರೆ ಅಂತ ಬಿಜೆಪಿಗೆ ಪ್ರಶ್ನಿಸಿದ್ರು.ಇದನ್ನು ಬಿಜೆಪಿಯವರು ಕೂಡ ಯೋಚಿಸಬೇಕಲ್ಲವೇ ಎಂದರು. ಇನ್ನು ಮುಂದುವರಿದು ಮಾತನಾಡಿದ ಮಹೇಶ್, ಯಾರೇ ಸಿಎಂ ಆದರೂ ಅವರು ಮಾತ್ರ ನೆಮ್ಮದಿಯಿಂದಿರಬೇಕು ಎಂದರು. ಅಲ್ಲದೆ ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯಿಂದ ಸರ್ಕಾರ ಪತನಗೊಳಿಸುವ ಪ್ರಯತ್ನ ಶುರುವಾಯ್ತು. ಪ್ರತಿಪಕ್ಷದ ಜಗದೀಶ್ ಶೆಟ್ಟರ್ ನಮಗೆ ಅಲ್ಪಮತವಿದೆ ಎಂದು ಹೇಳ್ತಿದ್ದಾರೆ. ಆದರೆ ಅತೃಪ್ತ ಶಾಸಕರ ರಾಜೀನಾಮೆ ಇನ್ನೂ ಅಂಗೀಕಾರವೇ ಆಗಿಲ್ಲ, ಅಲ್ಲದೆ ಅತೃಪ್ತರೂ ಕೂಡ ನಾವಿನ್ನೂ ಕಾಂಗ್ರೆಸ್ ನಲ್ಲೇ ಇದ್ದೇವೆ ಎನ್ನುತ್ತಿದ್ದಾರೆ. ಹೀಗಿದ್ದಾರೆ ಸರ್ಕಾರ ಅಲ್ಪಮತದಲ್ಲಿರಲು ಹೇಗೆ ಸಾಧ್ಯ ಅಂತ ಸಾ.ರಾ ಮಹೇಶ್ ಇದೇ ವೇಳೆ ಪ್ರಶ್ನಿಸಿದ್ರು.

ಬಳಿಕ ಮಾತನಾಡಿದ ಸಾ.ರಾ ಮಹೇಶ್, ನನಗೆ ಬಿಜೆಪಿ ಅನ್ಯಾಯ ಮಾಡಿಲ್ಲ, ನಾನೂ ಬಿಜೆಪಿಗೆ ಯಾವುದೇ ಅನ್ಯಾಯ ಮಾಡಿಲ್ಲ. ಆದರೆ ನಾನು ಶಾಸಕನಾಗುವ ಉದ್ದೇಶದಿಂದ ಜೆಡಿಎಸ್ ಸೇರ್ಪಡೆಯಾದೆ ಅಷ್ಟೆ. ಇದನ್ನು ಹೊರತುಪಡಿಸಿ ನನಗೆ ಸಚಿವ ಸ್ಥಾನದ ಆಕಾಂಕ್ಷೆಯಿರಲಿಲ್ಲ, ಹಣದ ಆಸೆಯೂ ಇಲ್ಲ ಅಂತ ಹೇಳಿದ್ರು. ಇನ್ನು ವಿಶ್ವನಾಥ್ ತಮಗೆ ಯಾವುದೇ ಆಸೆ ಇಲ್ಲ ಅಂತ ಹೇಳಿದ್ದರು ಆದರೆ ಅವರು ರಾಜೀನಾಮೆ ನೀಡಿರುವ ಉದ್ದೇಶವೇನು? ಇನ್ನು ಶಾಸಕರನ್ನು ಸೆಳೆಯೋ ಮೂಲಕ ಬಿಜೆಪಿ ಕಾರ್ಯಾಂಗ, ನ್ಯಾಯಾಂಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಅನ್ನೋ ಅನುಮಾನ ಈಗಾಗಲೇ ಜನರಲ್ಲಿ ಮೂಡಿದೆ ಅಂತ ಸಾ.ರಾ ಮಹೇಶ್ ಸದನದಲ್ಲಿ ಹೇಳಿದ್ದಾರೆ.

- Advertisement -

Latest Posts

Don't Miss