‘ಸಿದ್ದರಾಮಯ್ಯನವರು ಶ್ವೇತ ಪತ್ರ ಹೊರಡಿಸಲಿ, ನಾವು ತಯಾರಿದ್ದೇವೆ’

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಒಂದೇ ದಿನ 15 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕೊರೊನಾದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಒಟ್ಟು 229 ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. 71 ವರ್ಷದ ಚಿಂತಾಮಣಿ ಮೂಲದ ವೃದ್ದೆ ಮತ್ತು ಗೌರಿಬಿದನೂರು ತಾಲೂಕಿನ 60 ವರ್ಷದ ವೃದ್ದ ಸಾವನ್ನಪ್ಪಿದ್ದಾನೆ.

169 ಜನ ಸಂಪೂರ್ಣ ಗುಣಮುಖರಾಗಿದ್ದು, 53 ಆಕ್ಟಿವ್ ಪ್ರಕರಣಗಳಿದೆ, 5 ಜನ ಇಲ್ಲಿಯವರೆಗೆ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶ್ರೀರಾಮುಲು, ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಿದೆ. ಹತ್ತು ಸಾವಿರ ಬೆಡ್ ಗಳು ರೆಡಿ ಇದೆ. ಯಾವುದೇ ತೊಂದರೆ ಆಗದ ಹಾಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

https://youtu.be/7zYUFd1-mkg

ಅಲ್ಲದೇ, ಸಿದ್ದರಾಮಯ್ಯ ಶ್ವೇತ ಪತ್ರ ಹೊರಿಡಸಲಿಕ್ಕೆ ಕೇಳಿದ್ದಾರೆ: ನಾವು ತಯಾರಿದ್ದೇವೆ. ಕೊರೋನ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ‌ ಕೆಲಸ ಮಾಡಬೇಕಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಎಲ್ಲರು ಕೆಲಸ ಮಾಡ್ತಿದ್ದೇವೆ. ಶ್ವೇತ ಪತ್ರ ಹೊರಡಿಸಲಿ; ನಾವು ತಯಾರಿದ್ದೇವೆ. ಆಂಬುಲೆನ್ಸ್‌ನಲ್ಲಿ ವ್ಯಕ್ತಿ ಸಾವಿನ ಬಗ್ಗೆ ವರದಿ ಕೇಳಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಸಿ.ಎಂ ನೇತೃತ್ವದಲ್ಲಿ ಕೆಲಸ ಮಾಡ್ತಿದ್ದೇವೆ ಎಂದಿದ್ದಾರೆ.

ಈ ಬಗ್ಗೆ ಮಾತು ಮುಂದುವರಿಸಿರುವ ಶ್ರೀರಾಮುಲು, ಕೊರೋನ ಸೊಂಕಿತರ ಅಂತ್ಯ ಸಂಸ್ಕಾರದಿಂದ ತೊಂದರೆ ಆಗ್ತಿದೆ. ಸಾರ್ವಜನಿಕರಿಂದ‌ ಆರೋಪಗಳು ಕೇಳಿ ಬರುತ್ತಿದ್ದವು. ನಗರ ಪ್ರದೇಶದ ಶವ ಸಂಸ್ಕಾರ ಮಾಡುವ ಸ್ಥಳಗಳಲ್ಲಿ ಸಮಸ್ಯೆ ಆಗ್ತಿದೆ. ಅಂತ್ಯ ಸಂಸ್ಕಾರದ ನಂತರ ಕಿಟ್ಗಳು ಗಾಳಿಗೆ ಸಾರ್ವಜನಿಕ ಸ್ಥಳಗಳಿಗೆ ಬರುತ್ತಿವೆ,. ಇದರಿಂದ ಜನರು ಭಯ ಪಡುವ ಸ್ಥಿತಿ ಎದುರಾಗಿದೆ . ಎ.ಸಿ.ಎಸ್ ತಂಡಕ್ಕೆ ಸೂಚನೆ ನೀಡಿದ್ದೇನೆ . ಸರ್ಕಾರ ಆದೇಶ ಮಾಡಿ, ಪಾಸಿಟಿವ್ ಸಾವಿನ ಅಂತ್ಯ ಸಂಸ್ಕಾರ ನಗರ ಪ್ರದೇಶದ ಸ್ಮಶಾನದಲ್ಲಿ ಮಾಡಬಾರದು. ಊರ ಹೊರಗೆ ಎರಡು ಎಕ್ಕರೆ ಜಮೀನು ಗುರುತಿಸಿ, ಅಂತ್ಯ ಸಂಸ್ಕಾರಕ್ಕೆ ಅವಕಾಶ ಇದೆ ಎಂದು ತತ್‌ಕ್ಷಣ ಆದೇಶ ಮಾಡಲಿದ್ದೇವೆ ಎಂದಿದ್ದಾರೆ.

ಅಲ್ಲದೇ, ತಪಾಸಣೆ ನಡೆಸಿ ಮೂರು ನಾಲ್ಕು ದಿನಗಳಾದ್ರೂ ವರದಿ ಬರದ ಹಿನ್ನೆಲೆ ಚರ್ಚೆಗಳು ನಡೆಯುತ್ತಿವೆ. ಇನ್ನುಮುಂದೆ ತಡ ಆಗದ ಹಾಗೆ ನೋಡಿಕೊಳ್ಳಲಾಗುವುದು. ಪ್ರತಿ ಜಿಲ್ಲೆಯಲ್ಲಿ ಲ್ಯಾಬ್ ಮಾಡಲಾಗಿದೆ, ಬೆಂಗಳೂರಿನಲ್ಲಿ 47 ಲ್ಯಾಬ್ ಇವೆ. ಆದ್ರೂ ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಸ್ವಲ್ಪ ತಡ ಆಗ್ತಿದೆ. ಅದಕ್ಕಾಗಿ ಇನ್ನುಮುಂದೆ ಲ್ಯಾಬ್ ಸಹ ಹೆಚ್ಚು ಮಾಡ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಟಿಟಿ ವಾಹನಗಳಲ್ಲಿ ಕೊರೋನ ಸೊಂಕಿತರ ಶಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, ಪ್ರಕರಣ ಹೆಚ್ಚಾದಾಗ ಕರೆತಂದ್ರೂ ಭಯ ಪಡುವ ಅಗತ್ಯ ಇಲ್ಲ. ಸ್ವಚ್ಛಗೊಳಿಸಿ, ಸ್ಯಾನಿಟೈಸಿಂಗ್ ಮಾಡಲಾಗಿದೆ. ಕೆಲಸ‌ ಆಫೀಸರ್ಸ್, ತಹಶಿಲ್ದಾರ್ ಕಚೇರಿ, ಎಸಿ ಕಚೇರಿಗೆ ಪಾಸಿಟಿವ್ ಬಂದಿದೆ. ಹಾಗಂತ‌ ಪೂರ್ಣ ಲಾಕ್ ಡೌನ್ ಮಾಡಲು ಆಗಲ್ಲ. ನಿಯಮಗಳ ಪ್ರಕಾರ ಪುನರಾರಂಭ ಮಾಡಬೇಕಾಗುತ್ತೆ , ಮುಂಜಾಗ್ರತಾ ಕ್ರಮವನ್ನು ಅನುಸರಿಸಲಾಗುತ್ತದೆ. ತುರ್ತು ಸಂದರ್ಭದಲ್ಲಿ ಟಿಟಿ ಬಳಕೆ ಮಾಡ್ಲಿ, ಸ್ಯಾನಿಟೈಸ್ ಮಾಡಿ ಮರುಬಳಕೆ ಮಾಡಬಹುದು ಎಂದಿದ್ದಾರೆ.

About The Author