ಶ್ರವಣ ದೋಷದಿಂದ ಜನಿಸಿದ ಆರು ವರ್ಷದೊಳಗಿನ 500 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಗಳನ್ನು ನೀಡುವುದಾಗಿ ಆರೋಗ್ಯ ಸಚಿವ ಕೆ. ಸುಧಾಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು 2022-23ರ ಬಜೆಟ್ ನಲ್ಲಿ ‘ಶ್ರವಣದೋಷ ಮುಕ್ತ ಕರ್ನಾಟಕ’ವನ್ನು ರಚಿಸುವುದಾಗಿ ಘೋಷಿಸದರು. ಪ್ರಸಕ್ತ ಹಣಕಾಸು ವರ್ಷದಲ್ಲಿ ಆರು ವರ್ಷದೊಳಗಿನ 1,939 ಮಕ್ಕಳನ್ನು ಶ್ರವಣ ದೋಷದಿಂದ ಗುರುತಿಸಲಾಗಿದೆ ಎಂದು ಸಚಿವ ಸುಧಾಕರ್ ಅವರು ಹೇಳಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಪ್ ಹುಡಗಿ ಅದಿತಿ ಪ್ರಭುದೇವ
ಆರೋಗ್ಯ ಮತ್ತು ಯೋಗಕ್ಷೇಮ ಪ್ರತಿಯೊಂದು ಅಂಶವನ್ನು ಒಳಗೊಳ್ಳಲು ರಾಜ್ಉ ಆರೋಗ್ಯ ಇಲಾಖೆಯು ‘ಎಲ್ಲರಿಗೂ ಆರೋಗ್ಯ’ಎಂಬ ಘೋಷಣೆಯೊಂದಿಗೆ ಮಿಷನ್ ಮೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಆರು ವರ್ಷದೊಳಗಿನ ಮಕ್ಕಳ ಶ್ರವಣ ದೋಷದ ನಿವಾರಣೆಗೆ ವಿಶೇಷ ಗಮನ ನೀಡಲಾಗಿದೆ, ಇವರಲ್ಲಿ ಹೆಚ್ಚಿನವರು ಜನ್ಮಜಾತ ಕಿವುಡುತನದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದರು. ಇನ್ನು ಕಾಕ್ಲಿಯರ್ ಇಂಪ್ಲಾಂಟ್ ಒಂದು ಸಣ್ಣ ಎಲೆಕ್ಟ್ರಾನಿಕ್ಸ್ ಸಾಧನವಾಗಿದ್ದು,ಇದು ತೀವ್ರ ಮತ್ತು ಆಳವಾದ ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಹಾಸನದಲ್ಲಿ ನೋಡುಗರ ಗಮನ ಸೆಳೆದ ಡಾಗ್ ಶೋ : ವಿಜೇತ ಶ್ವಾನಕ್ಕೆ ಒಂದುವರೆ ಲಕ್ಷ ಬಹುಮಾನ