ಬೆಂಗಳೂರು: ಪಿಎಸ್ಐ ನೇಮಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸುತ್ತಿರುವ ಸಚಿವ ಸುನೀಲ್ ಕುಮಾರ್ ವಿ, ಸ್ಥಿತಿ ‘ತಾ ಕಳ್ಳ, ಇತರರ ನಂಬ’ ಎಂಬಂತಾಗಿದೆ. ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಖರ್ಗೆಯವರ ಬೆನ್ನಹಿಂದೆ ಕಾಂಗ್ರೆಸ್ ಪಕ್ಷ ಇದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ, ಶಾಸಕ ಪ್ರಿಯಾಂಕ್ ಖರ್ಗೆ ಪರ ಬ್ಯಾಟ್ ಬೀಸಿದ್ದಾರೆ.
ಇಂದು ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಅವರು, ಅಡಿಯಿಂದ ಮುಡಿವರೆಗೆ 100% ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ರಾಜ್ಯದ ಬಿಜೆಪಿ ಸರ್ಕಾರವನ್ನು ಸುಳ್ಳುಗಳ ಬಣ್ಣಹೊಡೆದು ಅಳಿಸಲಾಗದು. ಸರ್ಕಾರ, ತನಿಖಾ ಸಂಸ್ಥೆಗಳು ನಿಮ್ಮ ನಿಯಂತ್ರಣದಲ್ಲಿರಬಹುದು, ರಾಜ್ಯದ ಜನತೆ ನಮ್ಮ ಜೊತೆ ಇದ್ದಾರೆ ಎಂದು ಹೇಳಿದ್ದಾರೆ.
ಅಡಿಯಿಂದ ಮುಡಿವರೆಗೆ 100% ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ರಾಜ್ಯದ @BJP4Karnataka ಸರ್ಕಾರವನ್ನು ಸುಳ್ಳುಗಳ ಬಣ್ಣಹೊಡೆದು ಅಳಿಸಲಾಗದು. ಸರ್ಕಾರ, ತನಿಖಾ ಸಂಸ್ಥೆಗಳು ನಿಮ್ಮ ನಿಯಂತ್ರಣದಲ್ಲಿರಬಹುದು, ರಾಜ್ಯದ ಜನತೆ ನಮ್ಮ ಜೊತೆ ಇದ್ದಾರೆ. 3/3#PSISCAM
— Siddaramaiah (@siddaramaiah) April 25, 2022
ಪಿಎಸ್ಐ ನೇಮಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸುತ್ತಿರುವ ಸಚಿವ ಸುನೀಲ್ ಕುಮಾರ್ ವಿ, ಸ್ಥಿತಿ ‘ತಾ ಕಳ್ಳ, ಇತರರ ನಂಬ’ ಎಂಬಂತಾಗಿದೆ. ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಖರ್ಗೆಯವರ ಬೆನ್ನಹಿಂದೆ ಕಾಂಗ್ರೆಸ್ ಪಕ್ಷ ಇದೆ ಎಂದು ತಿಳಿಸಿದ್ದಾರೆ.
ಪಿಎಸ್ಐ ನೇಮಕ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ಶಾಸಕ @PriyankKharge ಅವರನ್ನೇ ತನಿಖೆಗೆ ಒಳಪಡಿಸಿ ಎಂದು ಒತ್ತಾಯಿಸುತ್ತಿರುವ ಸಚಿವ @karkalasunil ಸ್ಥಿತಿ ‘ತಾ ಕಳ್ಳ, ಇತರರ ನಂಬ’ ಎಂಬಂತಾಗಿದೆ.
ಈ ಬೆದರಿಕೆಗೆ ನಾವು ಜಗ್ಗುವುದಿಲ್ಲ. ಖರ್ಗೆಯವರ ಬೆನ್ನಹಿಂದೆ @INCKarnataka ಪಕ್ಷ ಇದೆ. 1/3#PSISCAM pic.twitter.com/Dmsrrv51Zv
— Siddaramaiah (@siddaramaiah) April 25, 2022
ಸಚಿವ ಸುನೀಲ್ ಕುಮಾರ್ ವಿ, ನೀಡಿದ ಹೇಳಿಕೆಯ ಬೆನ್ನಿನಲ್ಲಿಯೇ ಸಿಐಡಿ ಪೊಲೀಸರು ಪ್ರಿಯಾಂಕ್ ಖರ್ಗೆ ಅವರ ವಿಚಾರಣೆಗೆ ನೋಟೀಸ್ ನೀಡಿದ್ದನ್ನು ನೋಡಿದರೆ, ಬಿಜೆಪಿ ನಾಯಕರು ಹಗರಣದ ಬಗ್ಗೆ ಮಾತನಾಡುವವರ ಬಾಯಿಮುಚ್ಚಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಸಚಿವ @karkalasunil ನೀಡಿದ ಹೇಳಿಕೆಯ ಬೆನ್ನಿನಲ್ಲಿಯೇ ಸಿಐಡಿ ಪೊಲೀಸರು @PriyankKharge ಅವರ ವಿಚಾರಣೆಗೆ ನೋಟೀಸ್ ನೀಡಿದ್ದನ್ನು ನೋಡಿದರೆ, @BJP4Karnataka ನಾಯಕರು ಹಗರಣದ ಬಗ್ಗೆ ಮಾತನಾಡುವವರ ಬಾಯಿಮುಚ್ಚಿಸುವ ಹುನ್ನಾರ ನಡೆಸುತ್ತಿರುವಂತೆ ಕಾಣುತ್ತಿದೆ. 2/3#PSISCAM pic.twitter.com/3R7IQL1dH9
— Siddaramaiah (@siddaramaiah) April 25, 2022




