ರಾಜಕೀಯದಲ್ಲಿ ಯಾರು ಮಿತ್ರರಲ್ಲ ಯಾರು ಶತ್ರುಗಳಲ್ಲ. ನಾನೇನು ಸನ್ಯಾಸಿ ಅಲ್ಲ ರಾಜಕಾರಣದಲ್ಲಿ ಹಲವು ಕವಲುದಾರಿಗಳಿರುತ್ತವೆ.ಎಂದು ಸಚಿವ ಸೋಮಣ್ಣ ಮಅಧ್ಯಮದವರ ಮುಂದೆ ಹೇಳಿರುವುದನ್ನು ನೋಡಿದರೆ ಪಕ್ಷ ಬದಲಾವಣೆ ಮಾಡುವ ಲಕ್ಷಣಗಳು ಕಾಣುತ್ತಿವೆ.ಬಿಜೆಪಿಯಿಂದ ಕಾಂಗ್ರೆಸ್ ಕಡೆ ಮುಖ ಮಾಡೊದ್ದಾರೆ ಎಂದು ತಿಳಿಯುತ್ತದೆ.
ನಾನು ಯಾವತ್ತು ನನ್ನ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ ಬೇರೆ ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಇಲ್ಲವೆಂದರೆ ನನಗೂ ಬೇಡ ಎಂದಿದ್ದಾರೆ ಆದರೆ ಈ ನಿಯಮ ನನಗೆ ಅನ್ವಯವಾಗುವಂತೆ ಬೇರೆಯವರಿಗೂ ಅನ್ವಯವಾಗಬೇಕು.ಯಾರಿಗಾದರೂ ಮಕ್ಕಳ ಮೇಲೆ ಪ್ರೀತಿ ಇರುತ್ತದೆ. ಹಣೆಬರಹ ಇದ್ದರೆ ನನ್ನ ಮಗನಿಗೆ ಟಿಕೆಟ್ ಸಿಗುತ್ತದೆ. ಟಿಕೆಟ್ ಸಿಕ್ಕಿಲ್ಲವೆಂದು ಅಸಮಧಾನಗೊಂಡಿದ್ದೇನೆಂದು ಎಂದಾದರೂ ಹೇಳಿದ್ದೇನಾ ಎಂದು ಪ್ರಶ್ನಿಸಿದ್ದಾರೆ. ಹಾಗೂ ಏನು ಹೇಳಬೇಕು ಎಲ್ಲಿ ಹೇಳಬೇಕು ಹೇಳಿದ್ದೇನೆ. ರಾಜಕಾರಣದಲ್ಲಿ ಹಲವು ಕವಲುದಾರಿಗಳಿರುತ್ತವೆ, ನಾನೇನು ಸನ್ಯಾಸಿ ಅಲ್ಲ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ನಾನು ಮೊದಲಿನಿಂದಲೂ ಸ್ನೇಹಿತರೆ ನನ್ನ ಕೆಲಸ ನಾನು ಮಾಡುತ್ತೇನೆ ಅವರ ಕೆಲಸ ಅವರು ಮಾಡುತ್ತಾರೆ.ನನಗೆ ಕೊಟ್ಟಿರುವ ಜವಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಉಪಚುನಾವಣೆಯಲ್ಲಿ ತುಮಕೂರು ಲೋಕಸಭೆಯನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ.ನಾನು ಮೊದಲು ಕಾಂಗ್ರೆಸ್ ನಲ್ಲಿದ್ದವನು ಜನತಾದಳ ಪಕ್ಷದಲ್ಲಿ ಇದ್ದವನು. ನನ್ನ ಮಗನಿಗೆ ಟಿಕೆಟ್ ಕೇಳಿದ್ದೇನಾ? ಅಭಿಮಾನಿಗಳು ಸಭೆ ಮಾಡಿದರೆ ನಾನು ಮಾಡಬೇಡಿ ಎಂದು ಹೇಳುವುದಕ್ಕೆ ಆಗುತ್ತದೆಯೇ? ನಾಲ್ಕು ಗೋಡೆ ಮಧ್ಯೆ ಯಾರಿಗೆ ಏನು ಹೇಳಬೇಕು ಹೇಳಿದ್ದೇನೆ, ನನ್ನನ್ನು ಬೆಂಗಳೂರಿಗೆ ಮಾತ್ರ ಏಕೆ ಸೀಮಿತ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಇಲ್ಲ ಅಂದ್ರೆ ಇಲ್ಲ ಎಂದರು