Sunday, September 8, 2024

Latest Posts

ಸದನದಲ್ಲಿ ಧ್ವನಿಯೆತ್ತಿದ ಶಾಸಕ ಬಸನಗೌಡ ದದ್ದಲ್..!

- Advertisement -

www.karnatakatv.net :ರಾಯಚೂರು: ಜಿಲ್ಲಾದ್ಯಂತ  ಹೆಚ್ವಿದ ಡೆಂಗ್ಯೂ ಕಾಯಿಲೆ ಅಧಿವೇಶನದಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸವಗೌಡ ದದ್ದಲ್ ಧ್ವನಿ ಎತ್ತಿದ್ದರು.

ರಾಯಚೂರು ಜಿಲ್ಲೆಯಲ್ಲಿ ಮಕ್ಕಳಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಪೋಷಕರಲ್ಲಿ ಆತಂಕ ಮೂಡಿದೆ. ಈಗಾಗಲೇ ಜಿಲ್ಲೆಯಲ್ಲಿ 3500 ಜನರಲ್ಲಿ ಸ್ಯಾಂಪಲ್ ಸಂಗ್ರಯಿಸಲಾಗಿದ್ದು. ಇದರಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು. ಸಹಜವಾಗಿಯೇ ಪೋಷಕರಲ್ಲಿ ಆತಂಕ ಮೂಡಿದೆ.

ರಿಮ್ಸ್ ಆಸ್ಪತ್ರೆಯಲ್ಲಿ ಕೇವಲ 140ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಇದು ಸಾಕಾಗುತ್ತಿಲ್ಲ. ಒಂದೇ ಬೆಡ್ ನಲ್ಲಿ ಎರಡು ಮೂರು ಡೆಂಗ್ಯೂ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಜನರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ ಅಲ್ಲಿಯೂ ಕೂಡ ಇದೆ ವ್ಯವಸ್ಥೆ ಇದ್ದು, ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಿ  ಬೆಡ್ ವ್ಯವಸ್ಥೆ ಕಲ್ಪಿಸಬೇಕು. ಈ ಹಿಂದೆ ಅಪೌಷ್ಟಿಕತೆ ಯಿಂದ ಜಿಲ್ಲೆಯಲ್ಲಿ ಮಕ್ಕಳು ಮೃತಪಟ್ಟಿದ್ದರು ಅದರ ಜೊತೆಗೆ ಡೆಂಗ್ಯು ಪ್ರಕರಣಗಳು ಕೊರೊನಾಕ್ಕಿಂತಲೂ ಭೀಕರವಾಗಿದೆ ಎಂದು ಸದನದಲ್ಲಿ ಪ್ರಸ್ತಾಪಿದರು.

ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿ ಬಸನಗೌಡ ದದ್ದಲ್ ಅವರ ಪ್ರಶ್ನೆಗೆ ರಾಯಚೂರು ಜಿಲ್ಲೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಇದ್ದು,ಒಂದೇ ಬೆಡ್ ನಲ್ಲಿ ಎರಡು ಮೂರು ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಮಕ್ಕಳ ರಕ್ಷಣೆ ಸರ್ಕಾರ ದ ಕರ್ತವ್ಯ ಆದ್ದರಿಂದ ಸರ್ಕಾರ ಬೆಡ್ ಗಳ ವ್ಯವಸ್ಥೆ ಕಲ್ಪಿಸಲು ಸಲಹೆ ನೀಡಿದರು.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

- Advertisement -

Latest Posts

Don't Miss