MLA Kaneez Fathima ನಾಳೆ ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇನೆ..!

ರಾಜ್ಯದಲ್ಲಿ ಒಂದು ತಿಂಗಳಿನಿಂದ ಹಿಜಾಬ್ ವಿವಾದ (Hijab Controversy) ಭಾರೀ ಸುದ್ದಿಯಲ್ಲಿದೆ. ಇದೀಗ ಹಿಜಾಬ್ ವಿವಾದ ರಾಜಕೀಯ ಸ್ವರೂಪವನ್ನು ಪಡೆದುಕೊಂಡು ಭಾರೀ ಚರ್ಚೆಗೆ ಒಳಪಟ್ಟಿದೆ. ಈ ಕುರಿತು ಮಾತನಾಡಿರುವ ಕಲಬುರ್ಗಿ ಉತ್ತರ ಕ್ಷೇತ್ರದ (Kalaburgi North constituency) ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ( Mla Kaneez Fatima) ನಾನು ನಾಳೆ ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯವಿದ್ದರೆ ತಡೆಯಲಿ ಎಂದು ಸವಾಲು ಹಾಕಿದ್ದಾರೆ. ಸಾಧ್ಯವಾದರೆ ನಾನು ಉಡುಪಿಗೆ (Udupi) ಹೋಗಿ ವಿದ್ಯಾರ್ಥಿಗಳ ಹಿಜಾಬ್ ಹೋರಾಟಕ್ಕೆ (hijab struggle of students) ಬೆಂಬಲ ನೀಡುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ.

About The Author