ಮಂಡ್ಯ: ಚುನಾವಣೆ ಗೆದ್ದು ಸಂಸದೆಯಾಗುತ್ತಿದ್ದಂತೆ ಸುಮಲತಾ ಅಂಬರೀಶ್ ಗೆ ಕಠಿಣ ಜವಾಬ್ದಾರಿ ಹೆಗಲಿಗೇರಿದೆ. ಜಿಲ್ಲೆಯಲ್ಲಿ ರೈತರ ಬೆಳೆದ ಬಾಳೆ ಒಣಗುತ್ತಿದ್ದು ನಾಲೆಯಿಂದ ನೀರು ಬಿಡಿಸೋ ಜವಾಬ್ದಾರಿಯನ್ನ ಸುಮಲತಾ ಇದೀಗ ನಿಭಾಯಿಸಬೇಕಿದೆ.
ಕೆಆರ್ ಎಸ್ ನಿಂದ ರೈತರ ಬೆಳೆಗಳಿಗೆ ನೀರು ಬಿಡಿಸಬೇಕು, ಸಂಸದೆ ಸುಮಲತಾ ಇಗ ಕೇವಲ ಪಕ್ಷೇತರ ಅಭ್ಯರ್ಥಿಯಲ್ಲ, ಅವರು ನಮ್ಮ ಜಿಲ್ಲೆಯ ಸಂಸದೆ. ಹೀಗಾಗಿ ನಮ್ಮ ಜಿಲ್ಲೆಯ ನಾಲೆಗಳಿಗೆ ನೀರು ಹರಿಸೋ ವಿಚಾರದಲ್ಲಿ ನಮಗೆ ಬೆಂಬಲ ಸಿಕ್ಕಂತಾಗಿದೆ ಅಂತ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.
ಸುಮಲತಾ ಸದಾ ರೈತರ ಪರ, ಬಡವರ ಪರ ಇರಲಿ ಅಂತ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ಈ ಮೂಲಕ ಸಂಸದೆ ಸುಮಲತಾಗೆ ಮೊದಲ ಜವಾಬ್ದಾರಿ ಸಿಕ್ಕಂತಾಗಿದ್ದು ಇದನ್ನು ನಿಭಾಯಿಸ್ತಾರೆ ಅನ್ನೋ ವಿಶ್ವಾಸ ಮಂಡ್ಯ ರೈತರದ್ದಾಗಿದೆ.
ಈ ನಾಯಕರು ರಾತ್ರಿಯೆಲ್ಲೆ ನಿದ್ದೆಗೆಟ್ಟು ಏನ್ ಯೋಚ್ನೆ ಮಾಡ್ತಿದ್ರು ಗೊತ್ತಾ…? ಈ ವಿಡಿಯೋ ತಪ್ಪದೇ ನೋಡಿ