ಬೆಂಗಳೂರು:ಜೆಬಿ ನಗರದಲ್ಲಿರುವಂತ ಮೃತ ಚಂದ್ರು ಮನೆಗೆ ಮಂಗಳವಾರದಂದು ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ನೀಡಿದ್ದಾರೆ. ಮೃತ ಚಂದ್ರು ಅಗಲಿಕೆಯ ನೋವಿನಲ್ಲಿದ್ದಂತ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಜೆ ಬಿ ನಗರದ ವಾಸಿ ಚಂದ್ರು ಎಂಬಾತ ಗುಡ್ಡದಹಳ್ಳಿಯಲ್ಲಿ ರೋಲ್ ತಿನ್ನುವ ವಿಚಾರಕ್ಕಾಗಿ ಘರ್ಷಣೆ ನಡೆದಿತ್ತು. ಇದು ಕೊಲೆಯಲ್ಲಿ ಅಂತ್ಯಗೊಂಡಿದೆ. ಈ ಘರ್ಷಣೆಯಿಂದ ತೀವ್ರವಾಗಿ ಗಾಯಗೊಂಡ ಚಂದ್ರುವಿನನ್ನು ಆಸ್ಪತ್ರೆ ದಾಖಲು ಮಾಡಿದ್ದರೂ, ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನಯುಸಿರು ಎಳೆದಿದ್ದಾನೆ.
ಈ ಹಿನ್ನೆಲೆಯಲ್ಲಿ ಮಾಜಿ ಸಚಿವ, ಚಾಮರಾಜಪೇಟೆ ಶಾಸಕ ಶ್ರೀ ಬಿ ಝಡ್ ಜಮೀರ್ ಅಹಮದ್ ಖಾನ್ ಅವರು ನಿನ್ನೆ ಚಂದ್ರುವಿನ ಮನೆಗೆ ತೆರಳಿ ಅವರ ಸಹೋದರ ಮತ್ತು ಅಜ್ಜಿಗೆ ಸಾಂತ್ವಾನ ಹೇಳಿದ್ದಾರೆ. ಹಾಗೆಯೇ ಅವರ ಜೀವನೋಪಾಯಕ್ಕಾಗಿ ಎರಡು ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.
ಚಂದ್ರುವಿನ ಅಜ್ಜಿ ಮಾರುಕಟ್ಟೆಯಲ್ಲಿ ಪುಟ್ ಪಾತ್ ನಲ್ಲಿ ವ್ಯಾಪಾರ ಮಾಡಿಕೊಂಡಿದ್ದರು. ಆತನ ಕೊಲೆ ದುಖ ತಂದಿದೆ ಎಂದು ತಿಳಿಸಿದ ಜಮೀರ್, ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸಿದ್ದಾರೆ. ಶಾಸಕರೊಂದಿಗೆ ಚೆಲುವಾದಿಪಾಳ್ಯದ ಕಾಂಗ್ರೆಸ್ ನಾಯಕ ಅಹ್ಮದ್ ಖಾನ್, ಮಗೇಶ್ವರಿ, ವಿನಾಯಕ, ಜೈ ಕರ್ನಾಟಕ ಸಂಘಟನೆ ಮುಖಂಡರಾದ ವಸಂತ್ ಉಪಸ್ಥಿತರಿದ್ದರು.




