state news
ಕೋಲಾರ(ಮಾ.3): ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿರುವ ಶಾಸಕರನ್ನು ಕಡೆಗಣಿಸಿ ಮಾಜಿ ಶಾಸಕರ ಕೋರಿಕೆ ಮೇರೆಗೆ ಕೋಲಾರ ಕ್ಷೇತ್ರದ ಅಭಿವೃದ್ದಿ ಕಾರ್ಯಗಳಿಗೆ ಮುಖ್ಯ ಮಂತ್ರಿಗಳು ಹಣ ಒದಗಿಸಲು ಮುಂದಾಗಿರುವುದು ವಿಷಾದದ ಸಂಗತಿಯಾಗಿದೆ. ಮಾಜಿ ಶಾಸಕರು ಚುನಾವಣೆ ಸಂದರ್ಭದಲ್ಲಿ ನೇರವಾಗಿ 10% ಕಮೀಷನ್ ಪಡೆಯುವ ಮೂಲಕ ಚುನಾವಣೆಯಲ್ಲಿ ಹಣ ಹಂಚಲು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿ ಎಮ್ ಎಲ್ ಸಿ ಅನಿಲ್ ಕುಮಾರ್ ಆರೋಪಿಸಿದ್ದಾರೆ .
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶಾಸಕರು ಬಿಜೆಪಿ ಸರ್ಕಾರದ ನಡೆಯ ವಿರುದ್ದ ಕಿಡಿಕಾರಿದ್ದಾರೆ , ಕೋಲಾರ ಕ್ಷೇತ್ರದಲ್ಲಿ ಸ್ಪರ್ದೆಯ ಬಗ್ಗೆ ಸಿದ್ದರಾಮಯ್ಯ ರವರು ಘೋಷಣೆ ಮಾಡಿದ ನಂತರ ಬಸವರಾಜ್ ಬೊಮ್ಮಾಯಿ ಸರ್ಕಾರ ಮಾಜಿ ಶಾಸಕ ವರ್ತೂರು ಪ್ರಕಾಶ್ ಸೂಚನೆಯ ಮೇರೆಗೆ ಕೋಲಾರ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 10 ಕೋಟಿ ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಿದೆ ಯಾವುದೇ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಾರದೆ ಒಬ್ಬ ಮಾಜಿ ಶಾಸಕರ ಹೆಸರಲ್ಲಿ ಅನುದಾನ ಬಿಡುಗಡೆ ಮಾಡಿರುವುದು ಏಕೆ ? ಎಂದು ಪ್ರಶ್ನಿಸಿದ್ದಾರೆ .
ಚುನಾವಣೆ ಹತ್ತಿರದಲ್ಲಿರುವಾಗ ಸರ್ಕಾರದ ಈ ರೀತಿಯ ದೋರಣೆ ಸರಿಯಿಲ್ಲ , ಇದು ರಾಜಕೀಯ ಪ್ರೇರಿತ ಹಾಗೂ ರಾಜಕೀಯ ಲಾಭಕ್ಕಾಗಿ ಹೀಗೆ ಮಾಡಿದ್ದಾರೆ , ಸಂವಿದಾನದಲ್ಲಿ ಎಲ್ಲೂ ಸಹ ಮಾಜಿಶಾಸಕರ ಹೆಸರಲ್ಲಿ ಅನುದಾನ ಒದಗಿಸುವ ಅವಕಾಶ ನೀಡಿಲ್ಲ ಇಲ್ಲಿ ಶಾಸಕರ ಹಕ್ಕು ಚುತಿಯಾಗಿದೆ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಅವಮಾನ ಮಾಡಿದ್ದಾರೆ , ಇನ್ನು ಡಿಸೆಂಬರ್ ತಿಂಗಳಲ್ಲೇ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ನೀಡಿದ್ದರೂ ಯಾರೊಬ್ಬ ಅಧಿಕಾರಿಗಳೂ ನಮ್ಮ ಗಮನಕ್ಕೆ ತಂದಿಲ್ಲದಿರುವುದು ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಕಾಣಿಸುತ್ತದೆ .
ಚುನಾವಣೆಗೆ ಒಂದು ತಿಂಗಳು ಇರುವಾಗ ಅಧಿಕಾರಿಗಳು ಗುಟ್ಟಾಗಿ ಗ್ರಾಮಗಳಿಗೆ ಹೋಗಿ ಅಲ್ಲಿರುವ ಮಾಜಿ ಶಾಸಕರ ಅನುಯಾಯಿಗಳ ಜೊತೆಗೂಡಿ 89 ಕಾಮಗಾರಿಗಳಿಗೆ ಜಿಪಿಎಸ್ ಮಾಡಿ ಕಾಮಾಗಾರಿಗಳ ಎಷ್ಟಿಮೇಟ್ ತಯಾರಿಸಿದ್ದಾರೆ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡಬೇಕಾದರೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದು ಮುಂದುವರಿಯಬೇಕು , ಆದರೆ ವರ್ತೂರು ಪ್ರಕಾಶ್ ಇದನ್ನು ತೋರಿಸಿ ಜನರಿಗೆ ಆಮಿಷ ಒಡ್ಡುತ್ತಿದ್ದಾರೆ ಇದನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಸರ್ಕಾರದ ದೋರಣೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ .