ಹಾಸನ: ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಸಭೆ ನಡೆಸಿ ಸರ್ಕಾರಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದರಂತೆ ಎಂದು ಮಾಜಿ ಎಂ ಎಲ್ ಸಿ ಗೋಪಾಲ ಸ್ವಾಮಿ ಆರೋಪ ಮಾಡಿದ್ದಾರೆ ಈ ಕುರಿತು ಸಂಸದ ಪ್ರಜ್ವಲ್ ರೇವಣ್ಣ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಅವರಿಗೆ ಕಾನೂನು ಗೊತ್ತಿದೆ ಏನ್ರೀ, ನಾನು ಅಫೀಷಿಯಲ್ ಅಗಿ ಸಿಇಒ ಅವರನ್ನು ಒಳಗೊಂಡಂತೆ ಮೀಟಿಂಗ್ ಮಾಡುತ್ತಿದ್ದೇನೆ. ನಾನು ರಾಜಕೀಯವಾಗಿ ಆದ್ರೂ ಮೀಟಿಂಗ್ ಮಾಡ್ತೇನೆ, ವೈಯಕ್ತಿಕವಾಗಿ ಆದ್ರೂ ಮೀಟಿಂಗ್ ಮಾಡ್ತೇನೆ, ಸಾರ್ವಜನಿಕರ ಕಷ್ಟ ಕೇಳೋಕೆ ಆದ್ರೂ ಒಗ್ತಿನಿ, ಸರ್ಕಾರಿ ಭೇಟಿ ಆದ್ರೂ ಮಾಡ್ತೀನಿ ಅದನ್ನೆಲ್ಲ ಕಟ್ಟಿಕೊಂಡು ಇವರಿಗೇನು? ಎಂದು ಪ್ರಶ್ನಿಸಿದರು.
ಅವರು ಎಂಎಲ್ಸಿ ಅಗಿದ್ದಾಗ ಎಷ್ಟು ಬಾರ ತಾಲೂಕಿಗೆ ಭೇಟಿ ನೀಡಿದ್ದಾರೆ, ಚನ್ನರಾಯಪಟ್ಟಣದಿಂದ ಆಚೆ ಬರಲಿಲ್ಲ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಕೇಳಿದರು. ಅವರದ್ದು ಏನು ಕೆಲ್ಸ ಇದೆ ಅಷ್ಟು ಮಾತ್ರ ಮಾಡಲಿ, ಕಾಂಗ್ರೆಸ್ ನ ಕೆಲಸ ಇದ್ರೆ ಅದನ್ನ ಮಾಡಲಿ . ಅದನ್ನು ಬಿಟ್ಟು ಮೈಕ್ ಸಿಕ್ತು ಅಂತ ಬಾಯಿಗೆ ಬಂದಂತೆ ಮಾತನಾಡಿದರೆ ನಮಗೂ ಮಾತನಾಡೋಕೆ ಬರುತ್ತೆ.ನಾನು ಪಂಚಾಯಿತಿ ಹಂತದಲ್ಲಿ ತೆಗೆದುಕೊಳ್ಳುವ ಸಭೆಯಲ್ಲಿ ಯಾವುದೇ ಸರ್ಕಾರಿ ಹಣ ಬಳಕೆ ಮಾಡಿಲ್ಲ, ಅಲ್ಲಿನ ಕಾರ್ಯಕರ್ತರು ಮುಖಂಡರು ಹಣ ಹಾಕಿದ್ದಾರೆ ಎಂದು ಹೇಳಿದರು.
ಮುಂದಿನ ಸಿಎಂ ಈಶ್ವರ್ ಖಂಡ್ರೆ ಎಂದು ಘೋಷಣೆ ಕೂಗಿದ ಕಾರ್ಯಕರ್ತರು..!ನಿಜವಾಗುತ್ತಾ ಅವರು ಬಯಕೆ?
INDIA-ಒಕ್ಕೂಟದ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಏನ್ ಹೇಳಿದ್ರು ಗೊತ್ತಾ?