ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಗೋಡಕೆ ಬಡಾವಣೆಯ ಮೊಬೈಲ್ ಟವರ್ ಮೇಲೆ ಎರಡು ಧರ್ಮದ ಧ್ವಜ ಕಟ್ಟಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಗೋಡಕೆ ಬಡಾವಣೆ ನಿವಾಸಿಗಳಾದ ಸೈಯ್ಯದ್ ನಾಗನೂರ ಹಾಗೂ ರವಿ ಕಾನಗದ ಪೊಲೀಸ್ ವಶದಲ್ಲಿದರುವ ಯುವಕರು. ಬಡಾವಣೆಯ ಮೊಬೈಲ್ ಟವರ್ ಮೇಲೆ ಏಕಾಏಕಿ ಹಿಂದು- ಇಸ್ಲಾಂ ಧ್ವಜಗಳನ್ನು ಹಾರಿಸಲಾಗಿತ್ತು. ಶಾಂತಿಭಂಗ ಮಾಡುವ ಉದ್ದೇಶದಿಂದ ಭಗವಾ ಧ್ವಜ ಕೆಳಗಡೆ ಕಟ್ಟಲಾಗಿದೆ ಇದು ಜಿಹಾದಿಗಳ ಕೆಲಸ ಅಂತ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದರು.
ಪ್ರಕರಣದ ಸೂಕ್ಷ್ಮತೆ ಅರಿತ ಪೊಲೀಸರು ಐದೇ ಗಂಟೆಯಲ್ಲಿ ಆರೋಪಿಗಳ ವಶಕ್ಕೆ ಪಡೆದಿದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Cheluvarayaswamy: ಕೇಂದ್ರವು ತನ್ನ ಬೇಡಿಕೆಗಳನ್ನು ಅಂಗೀಕರಿಸದ ಕಾರಣ ತಮಿಳುನಾಡು ಎಸ್‌ಸಿ ಗೆ ಹೋಗಿದೆ
Flag Fight: ಟವರ್ನಲ್ಲಿ ಇಸ್ಲಾಂ ಬಾವುಟದ ಕೆಳಗೆ ಭಗವಾ ಧ್ವಜ ಕಟ್ಟಿದ ಆರೋಪ,
Independence Day : ಕಾರ್ಕಳ ಗಾಂಧೀ ಮೈದಾನದಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆ