Sunday, September 8, 2024

Latest Posts

ಭಾರತಕ್ಕೆ ಮತ್ತೊಂದು ಲಸಿಕೆ…

- Advertisement -

www.karnatakatv.net: ರಾಷ್ಟ್ರೀಯ- ನವದೆಹಲಿ- ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮಾಡರ್ನಾ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ(DCGI) ಅನುಮೋದನೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಭಾರತದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್ ಹಾಗೂ ಸ್ಪುಟ್ನಿಕ್-ವಿ ಹಾಗೂ ಮಾಡರ್ನಾ ಲಸಿಕೆಗಳು ಲಭ್ಯವಿದ್ದು, ಬರುವ ದಿನಗಳಲ್ಲಿ ಫೈಜರ್ ಲಸಿಕೆ ಕೂಡ ಬಳಕೆ ಮಾಡಲು ನಿರ್ಧರಿಸಲಾಗುವುದು ಎಂದು ತಿಳಿಸಿದ್ರು. ದೇಶದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಅವರ ಕೋವಿಡ್ ಲಸಿಕೆಯನ್ನ ಆಮದು ಮಾಡಿಕೊಳ್ಳಲು ಮುಂಬೈ ಮೂಲದ ಕಂಪನಿ ಸಿಪ್ಲಾಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ) ಅನುಮೋದನೆ ನೀಡಿದೆ. 18 ವರ್ಷ ಮೇಲ್ಪಟ್ಟವರಲ್ಲಿ ಮಾಡರ್ನಾ ಲಸಿಕೆ ಬಳಕೆ ಮಾಡಲಾಗುತ್ತಿದ್ದು, ಇನ್ಮುಂದೆ ಭಾರತದಲ್ಲೂ ಇದರ ಲಭ್ಯತೆ ಆಗಲಿದೆ ಎಂದ್ರು.

- Advertisement -

Latest Posts

Don't Miss