National News:
ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂರ‍್ಭದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಸ್ವಯಂಪ್ರೇರಿತ ರಕ್ತದಾನಕ್ಕಾಗಿ ಮೆಗಾ ಅಭಿಯಾನ ಪ್ರಾರಂಭಿಸಲಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಮೋದಿ ಹುಟ್ಟುಹಬ್ಬದ ದಿನದಂದು ಕೊವಿಡ್ ಲಸಿಕೆ ಅಭಿಯಾನ ನಡೆದಿದ್ದು, ಇದಕ್ಕೆ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಕಳೆದ ರ‍್ಷ ಸೆಪ್ಟೆಂಬರ್ 17 ರಂದು, ದೇಶಾದ್ಯಂತ ಸುಮಾರು 25 ಮಿಲಿಯನ್ ಕೊವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಲಾಯಿತು. ಇದು ದಾಖಲೆಯ ಲಸಿಕೆ ನೀಡಿಕೆ ಆಗಿತ್ತು . ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನವಾದ ಅಕ್ಟೋಬರ್ 1 ರವರೆಗೆ ಸ್ವಯಂಪ್ರೇರಿತ ರಕ್ತದಾನ ಅಭಿಯಾನ ನಡೆಯಲಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಯೋಜಿಸಲಾದ ರ‍್ಕಾರದ ಚಟುವಟಿಕೆಗಳ ಸರಣಿಗೆ ಅನುಗುಣವಾಗಿ ಇದನ್ನು ರಕ್ತದಾನ ಅಮೃತ ಮಹೋತ್ಸವ ಎಂದು ಕರೆಯಲಾಗುತ್ತದೆ. ಪ್ರಕ್ರಿಯೆಯನ್ನು ಸುಲಭಗೊಳಿಸಲು, ಆರೋಗ್ಯ ಸಚಿವಾಲಯವು ಇ-ರಕ್ತ್ ಕೋಶ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಿದೆ. ಅಲ್ಲಿ ರಕ್ತದಾನ ಮಾಡಲು ಸಿದ್ಧರಿರುವ ಜನರು ಔಪಚಾರಿಕವಾಗಿ ನೋಂದಾಯಿಸಿಕೊಳ್ಳಬಹುದು. ಸೆಪ್ಟೆಂಬರ್ 17 ರಿಂದ ನೋಂದಣಿ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ.
ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮರ‍್ಮು ಭಾಗವಹಿಸಲಿದ್ದಾರೆ
“ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ವಿರುದ್ದ ನಮ್ಮ ಪ್ರತಿಭಟನೆ” : ಎಚ್.ಡಿ.ಕೆ