ಮೋದಿ ಸರ್ಕಾರದ 10 ಅವಾಂತರಗಳ ಪಟ್ಟಿ ಮಾಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸರ್ಕಾರದ ಮೊದಲ 15 ದಿನಗಳಲ್ಲಿ ನಡೆದ 10 ಅವಾಂತರಗಳನ್ನು ಪಟ್ಟಿ ಮಾಡಿದ್ದಾರೆ.

ಭೀಕರ ರೈಲು ಅಪಘಾತ, ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳು, ರೈಲುಗಳಲ್ಲಿ ಪ್ರಯಾಣಿಕರ ದುಃಸ್ಥಿತಿ, NEET ಹಗರಣ, UGC ನೆಟ್ ಪೇಪರ್ ಸೋರಿಕೆ, ಹಾಲು, ಬೇಳೆಕಾಳುಗಳು, ಅನಿಲ, ಟೋಲ್ ಶುಲ್ಕ ದುಬಾರಿ, ಕಾಡ್ಗಿಚ್ಚು, ನೀರಿನ ಬಿಕ್ಕಟ್ಟು ಹಾಗೂ ಬಿಸಿಗಾಳಿಯಿಂದ ನೂರಾರು ಸಾವುಗಳನ್ನು ಉಲ್ಲೇಖಿಸಿ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.

ಮಾನಸಿಕವಾಗಿ ಬ್ಯಾಕ್‌ಫೂಟ್‌ನಲ್ಲಿರುವ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

About The Author