ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನಲೆ ಭಾರತದಾದ್ಯಂತ ಅಭಿಮಾನಿಗಳು, ಇತರ ನಾಯಕರು ಸಂಭ್ರಮದಲ್ಲಿದ್ದಾರೆ. ಸೆಪ್ಟೆಂಬರ್ 17ರಿಂದ ಅಕ್ಟೊಬರ್ 2 ವರೆಗೆ ಮೋದಿ ಅಭಿಯಾನವನ್ನ ನಡೆಸಲಿದ್ದಾರೆ. ದೇಶಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಒಡಿಶಾದಲ್ಲಿ ಗಿಡನೆಡುವ ಅಭಿಯಾನವನ್ನು ಸಹ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ.
ಮೋದಿ ಅವರ ಹುಟ್ಟುಹಬ್ಬಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಶ್ ಮಾಡಿದ್ದಾರೆ. ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ ಎಂದು ರಾಗಾ ತಮ್ಮ X ನಲ್ಲಿ ಹಂಚಿಕೊಂಡಿದ್ದಾರೆ. HD ದೇವೇಗೌಡ್ರು ವಿಶ್ ಮಾಡಿದ್ದಾರೆ. ಕಳೆದ 11 ವರ್ಷಗಳಿಂದ ನಮ್ಮ ದೇಶದ ನೇತೃತ್ವವನ್ನು ತಾವು ವಹಿಸಿದ್ದೀರಿ.
ತಮ್ಮ ನಾಯಕತ್ವ ಹಾಗೂ ಕಾರ್ಯವೈಖರಿಯನ್ನು ಭಾರತದ ಜನರು ಒಪ್ಪಿಕೊಂಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ನಿಮ್ಮ ದಣಿವರಿಯದ ಸಮರ್ಪಣೆ, ಶಿಸ್ತು & ಸಂಕಲ್ಪ ಪ್ರತಿಯೊಬ್ಬ ನಾಗರಿಕನಿಗೂ ದಾರಿದೀಪವಾಗಿದೆ. ಹೀಗಂತ ಹೆಚ್.ಡಿ.ಕುಮಾರಸ್ವಾಮಿ ಅವ್ರು ಮೋದಿ ಅವರಿಗೆ ವಿಶ್ ಮಾಡಿದ್ದಾರೆ.
ಜಾಗತಿಕ ನಾಯಕರಾಗಿ ದೇಶದ ಸಂಸ್ಕೃತಿ, ಸ್ವಾಭಿಮಾನ, ಶಕ್ತಿಗಳನ್ನು ಎತ್ತಿ ಹಿಡಿದ ದೇಶದ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು ಅಂತ ಪ್ರಹ್ಲಾದ್ ಜೋಶಿ ಶುಭಾಶಯವನ್ನ ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಆಲಿಯಾ ಭಟ್, ಅಮೀರ್ ಖಾನ್, ಅಜಯ್ ದೇವಗನ್, ಮಹೇಶ್ ಬಾಬು ಶಾರುಖ್ ಖಾನ್ ಮತ್ತು ಸಿನಿಮಾ ಕ್ಷೇತ್ರದ ಇತರ ಪ್ರಮುಖ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರ 75 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು
ವರದಿ : ಲಾವಣ್ಯ ಅನಿಗೋಳ

