Wednesday, December 11, 2024

Latest Posts

ಪ್ರಧಾನಿ ಮೋದಿ ಆಗಮನಕ್ಕೆ ಮಂಗಳೂರಿನಲ್ಲಿ ನಡೆಯುತ್ತಿದೆ ಭರದ ಸಿದ್ಧತೆ..!

- Advertisement -

Manglore News:

ಸೆಪ್ಟೆಂಬರ್ 2ರಂದು ಮಂಗಳೂರಿಗೆ  ಮೋದಿಯವರು  ಆಗಮಿಸಲಿದ್ದಾರೆ ಎನ್ನುವ ನಿಟ್ಟಿನಲ್ಲಿ ಮಂಗಳೂರು ಫುಲ್  ರೆಡಿಯಾಗುತ್ತಿದೆ. ರಸ್ತೆ ಡಾಮಾರೀಕರಣ ಚುರುಕುಗೊಂಡಿದ್ದು ಮಾತ್ರವಲ್ಲದೆ ಸಭೆ ನಡೆಸಿ ಜವಾಬ್ದಾರಿ ಹಂಚಿಕೆಯಾಗಿ ಯಾವುದೇ ಲೋಪವಾಗದಂತೆ ತಯಾರಿ ಪ್ರಕ್ರಿಯೆ ಭರದಿಂದ ನಡೆಯುತ್ತಿದೆ.

ಪ್ರಧಾನಿ ಮೋದಿ ಅವರು ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸರಣಿ ಸಭೆ ನಡೆಸಲಾಗುತ್ತಿದ್ದು, ಈಗಾಗಲೇ ಸಂಸದ ನಳಿನ್‌ ಕುಮಾರ್‌ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ಸೋಮವಾರ ನಡೆಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಭದ್ರತೆ ಸೇರಿದಂತೆ ಪೂರಕ ಸಿದ್ಧತೆಗಳ ಸಭೆ ನಡೆಸತೊಡಗಿದ್ದಾರೆ. ಸಮಾವೇಶ ನಡೆಯಲಿರುವ ಗೋಲ್ಡ್‌ಪಿಂಚ್‌ ಸಿಟಿ, ಪ್ರಧಾನಿ ವಾಸ್ತವ್ಯ ನಿಲ್ಲುವ ಸರ್ಕ್ಯೂಟ್  ಹೌಸ್‌ನ ಸುತ್ತಮುತ್ತ ಈಗಲೇ ಸಿದ್ಧತೆಗಳು ಆರಂಭಗೊಂಡಿದೆ.

ಸೆ.2ರಂದು ಬೆಳಗ್ಗೆ ಕೊಚ್ಚಿನ್‌ ಶಿಫ್‌ಯಾರ್ಡ್‌ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್‌ ಯುದ್ಧವಾಹಕ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡುವರು. ಮಧ್ಯಾಹ್ನ ಮಂಗಳೂರಿಗೆ ಆಗಮಿಸಿ ಎನ್‌ಎಂಪಿಎ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನವಮಂಗಳೂರು ಬಂದರಿಗೆ ಭೇಟಿ ನೀಡುವ ಪ್ರಧಾನಿಯವರು ಅಲ್ಲಿ ಈಗಾಗಲೇ ಪೂರ್ಣಗೊಂಡಿರುವ ಅನಘಾ ರಿಫೈನರಿ, ಬರ್ತ್‌ ನಂ.14 ಸೇರಿದಂತೆ 6 ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ರೀತಿ ಸಾಗರಮಾಲಾ ಯೋಜನೆಯ ಕೆಲವು ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಸಂಜೆ 4 ಗಂಟೆಗೆ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿರುವ ಕಾರಣ , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್‌ ಶೆಟ್ಟಿ, ವೇದವ್ಯಾಸ್ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಎನ್‌ಎಂಪಿಎ ಅಧ್ಯಕ್ಷ ಡಾ.ಎ.ವಿ.ರಮಣ, ಎಸಿ ಮದನಮೋಹನ್, ಎಂಸಿಸಿ ಆಯುಕ್ತ ಶ್ರೀಧರ್ ಮತ್ತು ಅಧಿಕಾರಿಗಳು ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರದಲ್ಲಿ ಸಾವಿರಾರು ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಟಿನ್ ಶೀಟ್ ಛಾವಣಿ ಹಾಕಲು ಆಡಳಿತ ಚಿಂತನೆ ನಡೆಸಿದೆ ಎನ್ನಲಾಗಿದೆ.

ಮೃತರಿಗೂ ಸದಸ್ಯಸ್ಥಾನ…! ಸರ್ಕಾರದ ಮಹಾ ಎಡವಟ್ಟು..!

ಗುತ್ತಿಗೆಯೆಲ್ಲಿ 40% ಕಮೀಷನ್ ಆರೋಪ: ಪುರಾವೆಗಳಿದ್ದರೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ – ಸಿಎಂ ಬೊಮ್ಮಾಯಿ

ದತ್ತು ಯೋಜನೆಯಡಿ ನವೀಕರಣಗೊಂಡಿರುವ ಬಿಬಿಎಂಪಿ ಮತ್ತು ಸರ್ಕಾರದ ಐದು ಶಾಲೆಗಳನ್ನು ಉದ್ಘಾಟಿಸಿದ ಸಚಿವ ಬಿ.ಸಿ. ನಾಗೇಶ್

- Advertisement -

Latest Posts

Don't Miss