Sunday, July 6, 2025

Latest Posts

ಮಂಗಳೂರು: ಮೋದಿಗೆ ಭಾಗವತಿಕೆಯ ಸ್ವಾಗತ…!

- Advertisement -

Manglore News:

ಮಂಗಳೂರಿನಲ್ಲಿ ಸೆ.2ರಂದು ಪ್ರಧಾನಿ ಮೋದಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಮಂಗಳೂರು ಫುಲ್ ರೆಡಿಯಾಗಿದೆ. ಸ್ಥಳ ಪರಿಶೀಲನೆಯಿಂದ ಹಿಡಿದು ರಕ್ಷಣಾ ವಿಚಾರದಲ್ಲೂ ಫುಲ್ ಭಧ್ರತೆ ತಯಾರಿಯಲ್ಲಿದೆ.

ಮತ್ತೊಂದೆಡೆ ಮಂಗಳೂರಿನ ರಸ್ತೆಗಳು ಡಾಮರೀಕರಣಗೊಂಡು ಫಳಫಳನೆ ಹೊಳೆಯುತ್ತಿದೆ. ಮತ್ತೊಂದೆಡೆ ಕರಾವಳಿಯಲ್ಲಿ ಪದೇ ಪದೇ ಮಳೆಯಾಗುತ್ತಿದ್ದು ಪ್ರಧಾನಿ ಸಮಾವೇಶಕ್ಕೆ ತೊಂದರೆಯಾಗದಂತೆ ಇಡೀ ಸಮಾವೇಶ ಸ್ಥಳವನ್ನು ಪೂರ್ತಿಯಾಗಿ ನೆಲಮಟ್ಟದಿಂದ ತುಸು ಎತ್ತರದಲ್ಲಿ ಫ್ಲ್ಯಾಟ್‌ಫಾರಂ ರಚಿಸಲಾಗುತ್ತದೆ. ಇದರಿಂದಾಗಿ ಒಂದು ವೇಳೆ ಮಳೆ ಬಂದರೂ ಕಾರ್ಯಕ್ರಮಕ್ಕೆ ತೊಂದರೆಯಾಗದಂತೆ ತಯಾರಿ ಮಾಡಲಾಗಿದೆ.

ಹಾಗೆಯೇ ಸಮಾವೇಶ ನಡೆಯುವ ಸ್ಥಳದಲ್ಲಿ ಜರ್ಮನ್ ಮಾದರಿ ಬೃಹತ್ ಪೆಂಡಾಲ್ ನಿರ್ಮಾಣವಾಗಲಿದೆ. ಇದು ಮಳೆಯಿಂದ ಪೂರ್ತಿ ರಕ್ಷಣೆ ನೀಡುತ್ತದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಗೋಲ್ಡ್‌ಫಿಂಚ್ ಸಿಟಿಯ 30 ಎಕರೆ ಜಾಗವನ್ನು ಪೂರ್ತಿ ಸ್ವಚ್ಚಗೊಳಿಸುವ ಕೆಲಸ ಭರದಿಂದ ಸಾಗಿದೆ.
ಅಲ್ಲಲ್ಲಿರುವ ಗಿಡಗಂಟೆ, ಮೋರಿ, ಪೈಪುಗಳನ್ನು ತೆರವು ಮಾಡಲಾಗುತ್ತಿದೆ. ಜೆಸಿಬಿ ಮೂಲಕ ಹಗಲು ರಾತ್ರಿ ಮೈದಾನವನ್ನು ಸಮತಟ್ಟುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲಲ್ಲಿ ಮಣ್ಣು, ಜಲ್ಲಿಪುಡಿಗಳನ್ನು ಬಳಸಿ ಮೈದಾನದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.

ಮೋದಿ ಆಗನದಲ್ಲಿ ಸಮಯ ಬದಲಾವಣೆ:

ಭಾರತದ ಪ್ರಧಾನಿ ನೃೇಂದ್ರ ಮೋದಿ ಅವರು ಸೆಪ್ಟೆಂಬರ್‌ 2 ರಂದು ಮಂಗಳೂರಿಗೆ ಭೇಡಿ ನೀಡಲಿದ್ದು, ಅಂದು ಸಂಜೆ ನಾಲ್ಕು ಗಂಟೆಗೆ ಆಗಮಿಸಲಿದ್ದಾರೆ ಎಂದು ನಿಗದಿಯಾಗಿತ್ತು ಆದರೆ ಇದೀಗ ಸಮಯದ ಬದಲವಾಣೆ ಮಾಡಲಾಗಿದೆ ನರೇಂದ್ರ ಮೋದಿ ಅವರು ಮಧ್ಯಾಹ್ನ 1 ಗಂಟೆಗೆ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ ಭೇಟಿ ನೀಡಿ, ಅಲ್ಲಿಂದ 1.15 ಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಜಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್‌ ಮೂಡುಬಿದಿರೆ ಅವರು ತಿಳಿಸಿದ್ದಾರೆ.

ಮೋದಿ ಆಗಮನಕ್ಕೆ ಭಾಗವತಿಕೆಯ ಸ್ವಾಗತ:

ಮೋದಿ ಆಗಮನದ ಸಂತಸದಲ್ಲಿರೋ ಮಂಗಳೂರು ಜನತೆ ವಿಶೇಷ ರೀತಿಯಲ್ಲಿ ಪ್ರಧಾನಿ ಆಗಮನಕ್ಕೆ ತಯಾರಿಯಲ್ಲಿದ್ದಾರೆ. ಇದೀಗ ಮಂಗಳೂರಿಗರು ಯಕ್ಷಗಾನದ ಸಗಡನ್ನು ಮೋದಿಗೆ ತಿಳಿಸುವ ಸಲುವಾಗಿ ಯೋಜನೆ ಹಾಕಿದ್ದಾರೆ.
ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವಜನತೆಯನ್ನು ತಂಡೋಪತಂಡವಾಗಿ ಸೆಳೆದ ಧೀಮಂತ ವ್ಯಕ್ತಿತ್ವ ಇದು. ಕನ್ನಡದ ವ್ಯಾಕರಣ ಶುದ್ಧತೆಗೆ ಹೆಸರಾಗಿರುವ ಯಕ್ಷಗಾನವನ್ನು ಮತ್ತಷ್ಟು ಪ್ರೇಕ್ಷಕರ ಸಮೀಪಕ್ಕೆ ತಂದವರು. ಯಕ್ಷಗಾನ ರಂಗದ ತೆಂಕುತಿಟ್ಟು ಮಾತ್ರವಲ್ಲ ಬಡಗುತಿಟ್ಟು ಪ್ರದೇಶಗಳಲ್ಲೂ ಜನಪ್ರಿಯತೆ ಗಳಿಸಿಕೊಂಡ ಅಪರೂಪದ ಯುವ ಭಾಗವತ ಇವರು. ದೇಶ, ವಿದೇಶಗಳಲ್ಲೂ ಇಂದು ಯಕ್ಷಗಾನದ ಕಂಪು ಪಸರಿಸುತ್ತಿರುವ ಈ ಯುವಕನ ಕಂಠ ಸಿರಿಗೆ ತಲೆದೂಗದವರಿಲ್ಲ.
ಅದೇ ಕಂಠಸಿರಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿಗೆ ಗಂಡುಕಲೆ ಯಕ್ಷಗಾನದ ಭಾಗವತಿಕೆಯಲ್ಲಿ ಸ್ವಾಗತ ಹಾಡೊಂದು ಹಾಡಲಾಗಿದೆ. ಸುಮಧುರ ಕಂಠದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಹೊಸ ಶೈಲಿಯ ಸ್ವಾಗತಕ್ಕೆ ಮಂಗಳೂರಿಗರು ಫುಲ್ ಖುಷ್ ಆಗಿದ್ದಾರೆ.

- Advertisement -

Latest Posts

Don't Miss