Thursday, October 30, 2025

Latest Posts

ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾಗೆ ಅಭಿನಂದನೆ ತಿಳಿಸಿದ ಮೋದಿ..!

- Advertisement -

www.karnatakatv.net : ಜಪಾನ್ ನಲ್ಲಿ ನಡೆದ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾರ ಪಕ್ಷ ಲಿಬರಲ್ ಡೆಮಾಕ್ರೆಟಿಕ್ ಪಾರ್ಟಿ ಬಹುಮತವನ್ನು ಸಾಧಿಸಿದೆ. ಈ ಮೂಲಕ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ. ಫುಮಿಯೋ ಕಿಶಿದಾಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

“ಜಪಾನ್ ಸಂಸತ್ತಿನ ಕೆಳಮನೆಯ ಚುನಾವಣೆಯಲ್ಲಿ ಜಯ ಗಳಿಸಿದ ಫುಮಿಯೋ ಕಿಶಿದಾರಿಗೆ ಹೃದಯ ಪೂರ್ವಕ ಅಭಿನಂದನೆಗಳು. ನಮ್ಮ ಕಾರ್ಯತಂತ್ರವನ್ನು ಬಲಪಡಿಸಲು ಹಾಗೂ ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಇಂಡೋ-ಪೆಸಿಫಿಕ್ ಹಾಗೂ ಜಾಗತಿಕವಾಗಿ ಶಾಂತಿ, ಸಮೃದ್ಧಿಗಾಗಿ ನಾವು ಜೊತೆಯಾಗಿ ಕಾರ್ಯ ನಿರ್ವಹಣೆ ಮಾಡುವೆವು,” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ತಮ್ಮ ಗೆಲುವಿನ ಬೆನ್ನಲ್ಲೇ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿದಾ “ಚೀನಾದ ಬೆದರಿಕೆ ತಡೆಗೆ ರಕ್ಷಣಾ ನೀತಿಗಳ ಪರಿಷ್ಕರಣೆ ಸೇರಿದಂತೆ ಕೆಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಕುಗ್ಗಿರುವ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹೆಚ್ಚುವರಿ ಬಜೆಟ್ ಅನ್ನು ನಿಗದಿ ಮಾಡಲಾಗುವುದು. ಹಾಗೆಯೇ ಜಾಗತಿಕ ತಾಪಮಾನ ತಡೆಗೂ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ,” ಎಂದು ಹೇಳಿದ್ದಾರೆ. ಹಾಗೇ “ನಾವು ಜನರ ಜೀವ, ಜೀವನದ ರಕ್ಷಣೆಗೆ ಪ್ರಥಮ ಆದ್ಯತೆಯನ್ನು ನೀಡುತ್ತೇವೆ. ಇದಕ್ಕೆ ಬಜೆಟ್ ಯಾವುದೇ ಅಡೆ ತಡೆ ಉಂಟು ಮಾಡುವುದಿಲ್ಲ,” ಎಂದು ಕಿಶಿದಾ ಭರವಸೆ ನೀಡಿದರು.

- Advertisement -

Latest Posts

Don't Miss