ಕೇಂದ್ರ ಸರ್ಕಾರವು ಸಣ್ಣ ವ್ಯಾಪಾರಿಗಳ ಹಿತದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈಗ ಅದರಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಯೋಜನೆಯನ್ನೂ ಪರಿಚಯಿಸಲು ಸಜ್ಜಾಗಿದೆ. ಸಾಮಾನ್ಯ ಬ್ಯಾಂಕ್ಗಳು ನೀಡುವ ಕ್ರೆಡಿಟ್ ಕಾರ್ಡ್ಗಳಂತೆ, ವ್ಯಾಪಾರಿಗಳಿಗೆ ಮುಂಗಡ ಪಾವತಿ ಸೌಲಭ್ಯ ಒದಗಿಸುವ ಉದ್ದೇಶದಿಂದ “ಮೋದಿ ಕ್ರೆಡಿಟ್ ಕಾರ್ಡ್” ಅನ್ನು ಸರ್ಕಾರ ತರಲು ನಿರ್ಧರಿಸಿದೆ. ಈ ಕಾರ್ಡ್ ಸಣ್ಣ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ಸುಲಭವಾಗಿ ನಡೆಸಲು ಸಹಾಯಕವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದು, ಈ ಹೊಸ ಕ್ರೆಡಿಟ್ ಕಾರ್ಡ್ ಮೂಲಕ 5 ಲಕ್ಷ ರೂಪಾಯಿಗಳವರೆಗೆ ಬಡ್ಡಿ ರಹಿತ ಸಾಲ ಲಭ್ಯವಾಗಲಿದೆ.
ಈ ಕಾರ್ಡ್ ಪಡೆಯಲು ಉದ್ಯಮ್ ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಮೊದಲ ಹಂತದಲ್ಲಿ ಹತ್ತು ಲಕ್ಷ ಕಾರ್ಡುಗಳನ್ನು ವಿತರಿಸುವ ಗುರಿ ಸರ್ಕಾರ ಹೊಂದಿದೆ. ಇದರ ಮೂಲಕ ಕೈಯಲ್ಲಿ ಹಣವಿಲ್ಲದಿದ್ದರೂ ವ್ಯಾಪಾರ ಆರಂಭಿಸಲು ಅಥವಾ ಮುಂದುವರಿಸಲು ಸಾಧ್ಯವಾಗುತ್ತದೆ. ನಂತರ ಲಾಭ ಗಳಿಸಿದ ಮೇಲೆ ಸಾಲವನ್ನು ಮರುಪಾವತಿಸಬಹುದು.
ಈ ಕಾರ್ಡ್ನಲ್ಲಿ ಮೊದಲ 45 ರಿಂದ 50 ದಿನಗಳವರೆಗೆ ಬಡ್ಡಿ ವಿಧಿಸಲಾಗುವುದಿಲ್ಲ. ಆ ಅವಧಿಯ ನಂತರ ಪಾವತಿಸಿದ ಮೊತ್ತದ ಆಧಾರದ ಮೇಲೆ ಬಡ್ಡಿ ನಿರ್ಧಾರವಾಗುತ್ತದೆ. ಜೊತೆಗೆ, EMI ಸೌಲಭ್ಯ ಸಹ ಲಭ್ಯವಿರುತ್ತದೆ. ಈ ಯೋಜನೆಗಾಗಿ ಸರ್ಕಾರ ಈಗಾಗಲೇ ಹಲವಾರು ಬ್ಯಾಂಕ್ಗಳೊಂದಿಗೆ ಕೈಜೋಡಿಸಿದೆ. ವ್ಯಾಪಾರಿಗಳಿಗೆ ದೊಡ್ಡ ನೆರವಾಗಲಿರುವ ಈ ಮೋದಿ ಕ್ರೆಡಿಟ್ ಕಾರ್ಡ್ ಯೋಜನೆ, ಸಣ್ಣ ವ್ಯಾಪಾರ ಕ್ಷೇತ್ರದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲಿದೆ..
ವರದಿ:ರಂಜಿತ ರೇವಣ್ಣ ನಾಟನಹಳ್ಳಿ