www.karnatakatv.net : ಬ್ರಿಟನ್ ಮತ್ತು ಇಟಲಿ ಪ್ರವಾಸದಲ್ಲಿರುವ ನರೇಂದ್ರ ಮೋದಿ ಐರೋಪ್ಯ ಒಕ್ಕೂಟ ರಾಷ್ಟ್ರಗಳ ನಾಯಕರ ಜತೆ ವಾಣಿಜ್ಯ, ವ್ಯವಹಾರ, ಸಂಸ್ಕೃತಿ ಹಾಗೂ ಪರಿಸರಕ್ಕೆ ಸಂಬoಧಿಸಿದ ಚರ್ಚೆ ನಡೆಸಿದರು.
ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವಿನ ದ್ವಿಪಕ್ಷಿಯ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯಲು ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ಧ ಎಂದು ಐರೋಪ್ಯ ಒಕ್ಕೂಟದ ನಾಯಕರು ಪ್ರಧಾನಿ ಮೋದಿ ಅವರಿಗೆ ಭರವಸೆ ಕೊಟ್ಟಿದ್ದಾರೆ. ಇದೇ ವೇಳೆ ಐರೋಪ್ಯ ಒಕ್ಕೂಟದ ಪ್ರತಿನಿಧಿಗಳು ಭಾರತದಲ್ಲಿ ಕೊರೊನಾ ತಡೆ ಲಸಿಕೆಯ 100 ಕೋಟಿ ಪೂರೈಕೆ ಸಾಧನೆ, ಇತರ ದೇಶಗಳಿಗೂ ಲಸಿಕೆಗಳನ್ನು ರಫ್ತುಮಾಡಿ ಭಾರತ ನೀಡಿದ ನೆರವಿಗೆ ಮುಕ್ತ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉಳಿದಂತೆ, ಅಫ್ಘಾನಿಸ್ತಾನದಲ್ಲಿ ರಾಜಕೀಯ ಸ್ಥಿತಿಗತಿಗಳ ಬದಲಾವಣೆ, ಹವಾಮಾನ ವೈಪರೀತ್ಯ ನಿಯಂತ್ರಣ, ಹೂಡಿಕೆಗೆ ಉತ್ತೆಜನ ವಿಚಾರಗಳು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಇಂದು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿನ್ ಅವರನ್ನು ಭೇಟಿಯಾಗಲಿದ್ದು, ನಂತರ 16ನೇ ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಿ ಜಾಗತಿಕ ವಿದ್ಯಾಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಬೆಳಗ್ಗೆ 8.30 ರಿಂದ 30 ನಿಮಿಷಗಳ ಭೇಟಿ ನಿಗದಿಯಾಗಿದೆ. ಈ ವೇಳೆ ಕ್ಯಾಥೊಲಿಕ್ ಚರ್ಚ್ನ ಮುಖ್ಯಸ್ಥರಾದ ಕಾರ್ಡಿನಲ್ ಪೀಟ್ರೊ ಪರೊಲಿನ್ ಸಹ ಉಪಸ್ಥಿತರಿರಲಿದ್ದಾರೆ.




