ಕರ್ನಾಟಕ ಟಿವಿ : ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಮೇ 30ಕ್ಕೆ ಒಂದು ವರ್ಷ ಆಗುತ್ತೆ. ಬಿಜೆಪಿಗೆ ವರ್ಷಾಚರಣೆ ಮಾಡಲು ಕೊರೊನಾ ತೊಡಕಾಗಿದೆ. ಹೀಗಾಗಿ ಬಿಜದೆಪಿ ನಾಯಕರು ಎರಡನೇ ಅವಧಿಯ ವರ್ಷಾಚರಣೆಯನ್ನ ವಿಭಿನ್ನವಾಗಿ ಮಾಡಲು ಮುಂದಾಗಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ವರ್ಷಾಚರಣೆ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರದ ಸಾಧನೆಗಳನ್ನ ಜನರಿಗೆ ತಿಳಿಸಲು ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ತಿಳೀಸಲಾಗಿದೆ. ಈ ಭಾರಿಯ ವಿಶೇಷ ಅಂದ್ರೆ ಬಿಜೆಪಿ ಕಾರ್ಯಕರ್ತರು ಸ್ವದೇಶಿ ವಸ್ತುಗಳ ಬಗ್ಗೆ ಪ್ರಚಾರ ಮಾಡುವುದು ಹಾಗೂ ಸ್ಥಳೀಯ ವ್ಯಾಪಾರಸ್ಥರ, ರೈತರ ಬೆಳೆಗಳನ್ನ ಬ್ರಾಂಡ್ ಮಾಡಲು ಸೂಚಿಸಲಾಗಿದೆ. ಬೂತ್ ಮಟ್ಟದಿಂದಲೂ ವಾಟ್ಸಪ್ ಗ್ರೂಪ್ ಮಾಡಿಕೊಂಡು ಸರ್ಕಾರದ ಸಾಧನೆಗಳನ್ನ ತಲುಪಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ.. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಮೈತ್ರಿಕೂಟ 353 ಸ್ಥಾನಗಳನ್ನ ಗಳಿಸಿತ್ತು.. ಕಾಂಗ್ರೆಸ್ 52 ಸ್ಥಾನಗಳನ್ನ ಗಳಿಸಿ ಹೀನಾಯ ಸ್ಥಿತಿಯಲ್ಲೇ ಮುಂದುವರೆದಿತ್ತು. ಯುಪಿಎ 91 ಸ್ಥಾನ ಗಳಿಸಿದ್ರೆ ಯುಪಿಎ, ಎನ್ ಡಿಎ ಏತರ ಪಕ್ಷಗಳು 98 ಸ್ಥಾನಗಳನ್ನ ಗಳಿಸಿದ್ವು.. ‘
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 6 ವರ್ಷದ ಆಡಳಿತ ನಿಮಗೆ ತೃಪ್ತಿ ತಂದಿದೆಯಾ.? ಕಾಮೆಂಟ್ ಮಾಡಿ
ನ್ಯೂಸ್ ಡೆಸ್ಕ್, ಕರ್ನಾಟಕ ಟಿವಿ, ಬೆಂಗಳೂರು