Saturday, July 27, 2024

Latest Posts

ಮೋದಿ ಶೌಚಾಲಯ ಕಟ್ಟಿಸಿದ್ದಾರೆ. ಕಾಂಗ್ರೆಸ್‌ನವರು ಚೊಂಬು ಹಿಡ್ಕೊಂಡು ಓಡಾಡುತ್ತಿದ್ದಾರೆ: ಜೋಶಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಸುಳ್ಳಿ‌‌ನ ಸರದಾರರು. ಮುಸ್ಲಿಂ ಮೀಸಲಾತಿ ವಿಚಾರವಾಗಿ ಸುಳ್ಳು ಹೇಳುತ್ತಿದ್ದಾರೆ. ಅವರು ಬಂದ ನಂತರ ಪತ್ರ ಬರೆದಿದ್ದಾರೆ. ನನ್ನ ಹತ್ರ ಇವರು ಕಳಸಿರೋ ನೋಟಿಸ್ ಇದೆ. ಸುಳ್ಳು ಹೇಳಿ SC, ST, OBC ಮೀಸಲಾತಿ ಕಬಳಿಸಿ ಅವರ ವೋಟ್ ಬ್ಯಾಂಕ್‌ಗೆ ಕೊಡ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಧರ್ಮಾಧಾರಿತ ಮೀಸಲಾತಿ ‌ಇಲ್ಲ. ದೇಶದ ಸಂವಿಧಾನದಲ್ಲಿ ಎಲ್ಲೂ ಧರ್ಮಾಧಾರಿತ ಮೀಸಲಾತಿ‌ ಇಲ್ಲ. ಸುಪ್ರೀಂ ‌ಕೋರ್ಟ್ ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ಪ್ರತಿ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ.
ನಾವ ಹಿಂದೆ ಶೇಕಾಡ 2 ರಷ್ಟು ಒಕ್ಕಲಿಗ,ಶೇಕಡಾ ಎರಡಷ್ಟು ಲಿಂಗಾಯತರಿಗೆ ಕೊಟ್ಟಿದ್ದು ವಿರೋಧ ಮಾಡಿದ್ರು. ಅದನ್ನು ಇದೀಗ ಸಿದ್ದರಾಮಯ್ಯ ಸಾಧಿಸ್ತಿದ್ದಾರೆ. ನೋಟಿಸ್ ಗೆ ಸಿದ್ದರಾಮಯ್ಯ ಉತ್ತರ ಕೊಡಲಿ. ಪರ್ಸನಲ್ ಹಾಜರಾಗೋಕೆ ಹೇಳಿದ್ದಾರೆ.‌.

ಮತದಾರರಲ್ಲಿ ನನ್ನ ವಿನಂತಿ ಇದೆ. ಮೋದಿ ಗೆದ್ದು ಬಿಟ್ಟಿದ್ದಾರೆ ಅನ್ನೋ ಭಾವನೆಯಲ್ಲಿ ಇರಬೇಡಿ. ಬಹಳ ಅಭೂತಪೂರ್ವದ ಬೆಂಬಲ ಬೇಕಾಗಿದೆ. ನನಗೆ ಯಾರೂ ವೈರಿಗಳಿಲ್ಲ, ವಿರೋಧಿಗಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವೈರಿಗಳಿದ್ದಾರೆ. ನಾನು ವಿನಯ ಕುಲಕರ್ಣಿಯನ್ನು ವೈರಿ ಅಂತಾ ಭಾವಿಸಿಲ್ಲ. ಅವರು ಏನ ಅಂತಾ ಭಾವಿಸಿದ್ದಾರೆ ಎಂದು ಅವರ ಭಾಷಣದಲ್ಲಿ ಗೊತ್ತಾಗತ್ತೆ ಎಂದು ಜೋಶಿ ಹೇಳಿದ್ದಾರೆ.

ಮೋದಿ ಅವರದು ನಾಳೆ ರಾಜ್ಯ ಪ್ರವಾಸ ಇದೆ. ಬೆಳಗಾವಿ, ಬಾಗಲಕೋಟೆ, ದಾವಣಗೇರೆಯಲ್ಲಿ ಪ್ರವಾಸ ಇದೆ. ಮೋದಿ ಅವರ ಬರೋ ಕಾರಣ ಜನರಿಗೆ ಉತ್ಸಾಹ ಬರತ್ತೆ. ಮೋದಿ ಅವರು ಬಂದ ನಂತರ ಶೌಚಾಲಯ ಕೊಟ್ಟು ಚೊಂಬು ನಿಲ್ಲಿಸಿದ್ದೇವೆ. ಕಾಂಗ್ರೆಸ್ ಪಾರ್ಟಿಯವರು ಚೊಂಬು ತಗೆದುಕೊಂಡು ಓಡಾಡ್ತಾರೆ. ಕಾಂಗ್ರೆಸ್ ನವರಿಗೆ ಚೊಂಬು ಹಿಡಿದು ಓಡಾಡಿಕೊಳ್ಳೋದು ಪ್ರ್ಯಾಕ್ಟೀಸ್ ಆಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಆದರೂ ಕಾಂಗ್ರೆಸ್ ಚೊಂಬು ಕೊಡೋದು ಬಿಟ್ಟಿಲ್ಲ. ನೀವು ಚೊಂಬು ತೋರಿಸಿದ ಪರಿಣಾಮ ನೀವು ಎರಡುವರೆ ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಚೊಂಬು ತೋರಿಸಿ ರಾಜಸ್ಥಾನಸಲ್ಲಿ ಸೋತ್ರಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಅಂಬೇಡ್ಕರ್ ಸೋಲಿಸಲು ಕಾಂಗ್ರೆಸ್ ಕಠಿಬದ್ದವಾಗಿತ್ತು. ಪ್ರಜಾಪ್ರಭುತ್ವ ಕತ್ತು ಹಿಚಕಿ ಚೊಂಬು ಕೊಟ್ಟವರು ನೀವು. ಅಂಬೇಡ್ಕರ್ ಅಪಮಾನ ಮಾಡಿ ಚೊಂಬು ಕೊಟ್ಟವರು ನೀವು. ಬೇರೆಯವರು ಚೊಂಬು ಕೊಡೋದರ ಬಗ್ಗೆ ನೀವೇನ ಮಾತಾಡ್ತೀರಿ. ಮೋದಿ ಅವರು ಬಂದ ಮೇಲೆ ಬ್ರಷ್ಟಾಚಾರ ಹೊರತಗೆದಿದ್ದಾರೆ. ನೀವು ವಿರೋಧ ಪಕ್ಷ ಆಗಲು ಅರ್ಹ ಇರಲಾರದ ಚೊಂಬು ಕೊಟ್ಟಿದ್ದಾರೆ. ನೀವು ಅರಾಮ್ ಚೊಂಬು ಹಿಡಕೊಂಡೆ ಓಡಾಡಿ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

- Advertisement -

Latest Posts

Don't Miss