ಬಿಹಾರ ಚುನಾವಣಾ ರಂಗದಲ್ಲಿ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ ಮುಖವನ್ನು ಬಳಸಿಕೊಂಡು ಬಿಜೆಪಿ ಬಿಹಾರದಲ್ಲಿ ರಿಮೋಟ್ ಕಂಟ್ರೋಲ್ ಸರ್ಕಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಸಾಮಾಜಿಕ ನ್ಯಾಯದ ವಿರುದ್ಧ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ, ಜಾತಿ ಗಣತಿ ವಿರೋಧದ ನಿಲುವೇ ಅದಕ್ಕೆ ಸಾಕ್ಷಿ. ಮತಗಳು ಸಿಗತ್ತೆ ಅಂದ್ರೆ ಮೋದಿ ವೇದಿಕೆಯ ಮೇಲೆ ನೃತ್ಯ ಮಾಡಲು ಸಹ ಸಿದ್ಧರಾಗಿರುತ್ತಾರೆ ಎಂದು ಆರೋಪಿಸಿದರು.
ಎಂದರು.
ಇಂದು ಭಾರತದಲ್ಲಿ ಎರಡು ಭಾರತಗಳು ರೂಪಗೊಂಡಿವೆ – ಒಂದು ಸಾಮಾನ್ಯ ಜನರದ್ದು. ಮತ್ತೊಂದು ಶತಕೋಟ್ಯಾಧಿಪತಿಗಳದು ಎಂದು ಗಾಂಧಿ ಟೀಕಿಸಿದರು. ಛತ್ ಪೂಜೆಯ ಸಮಯದಲ್ಲಿ ಮೋದಿ ಯಮುನಾ ನದಿಯಲ್ಲಿ ಸ್ನಾನ ಮಾಡುವ ನಾಟಕ ಮಾಡಿದ್ದಾರೆ. ಅದು ಪೈಪ್‌ನೀರಿನ ಸ್ಟಂಟ್ ಆಗಿ ಬಯಲಾಗಿದೆ ಎಂದು ವ್ಯಂಗ್ಯವಾಡಿದರು.
ಬಿಹಾರದಲ್ಲೂ ಬಿಜೆಪಿ ಮತ ಕಳ್ಳತನದ ರಾಜಕೀಯ ನಡೆಸುತ್ತಿದೆ. ಇದು ಅಂಬೇಡ್ಕರ್ ಸಂವಿಧಾನದ ಮೇಲಿನ ನೇರ ದಾಳಿ ಎಂದರು. ನಾವು ಸಂವಿಧಾನವನ್ನು ಕಾಪಾಡುತ್ತೇವೆ ಎಂದು ಘೋಷಿಸಿದ ರಾಹುಲ್ ಗಾಂಧಿ, ಬಿಹಾರ ಜನರ ಬುದ್ಧಿಮತ್ತೆ ಮತ್ತು ಸಾಮರ್ಥ್ಯವನ್ನು ಪ್ರಶಂಸಿಸಿ, ಒಂದು ದಿನ ಅಮೆರಿಕನ್ನರೂ ಬಿಹಾರಕ್ಕೆ ಶಿಕ್ಷಣಕ್ಕಾಗಿ ಬರಲಿದ್ದಾರೆ ಎಂದು ಉತ್ಸಾಹದ ನುಡಿಯಿಂದ ಭಾಷಣ ಮುಗಿಸಿದರು.
ವರದಿ : ಲಾವಣ್ಯ ಅನಿಗೋಳ

