Friday, July 4, 2025

Latest Posts

11 ರಾಜ್ಯಗಳಲ್ಲಿ ಲಸಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಮೋದಿ ಸಭೆ..!

- Advertisement -

www.karnatakatv.net: ಇಂದು ನರೇಂದ್ರ ಮೋದಿ ಕೊವಿಡ್ ಲಸಿಕೆ ನೀಡಿಕೆ ಕಡಿಮೆಯಿರುವ ಕನಿಷ್ಠ 11 ರಾಜ್ಯಗಳಲ್ಲಿ ಲಸಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಕಡಿಮೆ ವ್ಯಾಕ್ಸಿನೇಷನ್ ಕವರೇಜ್ ಅಥವಾ ಕೊವಿಡ್ ಲಸಿಕೆ ನೀಡಿಕೆ ಕಡಿಮೆಯಿರುವ ರಾಜ್ಯಗಳಲ್ಲಿ ಲಸಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲು ಸಭೆಯನ್ನು ನಡೇಸಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಯಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಹಾಗೇ ಜಾರ್ಖಂಡ್, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಪಂಜಾಬ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲಿ 40 ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಹಾರಾಷ್ಟ್ರವು ಕೊರೊನಾ ಸೋಂಕುಗಳಲ್ಲಿ ಕಡಿಮೆ ದಾಖಲೆಯನ್ನು ದಾಖಲಿಸಿದ ದಿನದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜ್ಯ ಆಡಳಿತದ ಮುಂದೆ ಕಠಿಣ ಕಾರ್ಯವನ್ನು ಮುಂದಿಟ್ಟಿದ್ದಾರೆ. ನವೆಂಬರ್ 30 ರೊಳಗೆ ಮಹಾರಾಷ್ಟ್ರದ ಎಲ್ಲಾ ನಾಗರಿಕರು ಸಂಪೂರ್ಣವಾಗಿ ಲಸಿಕೆ ಹಾಕಬೇಕೆಂದು ಠಾಕ್ರೆ ಬಯಸಿದ್ದು ಪ್ರತಿ ನಾಗರಿಕರು ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ದಿನಕ್ಕೆ ದಾಖಲೆ ಸಂಖ್ಯೆಯ ಲಸಿಕೆ ಗುರಿಯಾಗಿಟ್ಟುಕೊಂಡು ಆಡಳಿತವು ಈಗಾಗಲೇ ಕೊವಿಡ್ ಲಸಿಕೆ ಡ್ರೈವ್ ಅನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿದೆ. ಮಹಾರಾಷ್ಟ್ರದ ಕೊವಿಡ್ ಲಸಿಕೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪರಿಶೀಲಿಸುವ ಮುನ್ನ ಈ ಕ್ರಮ ಕೈಗೊಳ್ಳಲಾಗಿದೆ.

- Advertisement -

Latest Posts

Don't Miss