Friday, October 17, 2025

Latest Posts

ತಮಿಳುನಾಡಲ್ಲಿ ಶುರು ‘ಮೋದಿ ಇಡ್ಲಿ’ ಹವಾ..!

- Advertisement -

ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯವೈಖರಿ ಮೂಲಕವೇ ಕೇವಲ ದೇಶದ ಅಧಿಕಾಂಶ ಮಂದಿಯ ಪಾಲಿಗೆ ನೆಚ್ಚಿನ ನಾಯಕನಾಗಿದ್ದಾರೆ. ಇದೀಗ ತಮಿಳುನಾಡಿನಲ್ಲೂ ಮೋದಿ ಮೇನಿಯಾ ಶುರುವಾಗಿದ್ದು ನಮೋ ಹೆಸರಲ್ಲಿ ಇಡ್ಲಿ ವ್ಯಾಪಾರಕ್ಕೆ ತಯಾರಿ ನಡೆದಿದೆ.

Karnataka TV Contact

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನ ನಡೆಸಲಾಗ್ತಿದೆ. ಕೇವಲ 10 ರೂಪಾಯಿಗೆ 4 ಮೋದಿ ಇಡ್ಲಿ ಲಭ್ಯವಿದ್ದು ಪ್ರಾಥಮಿಕ ಹಂತವಾಗಿ 22 ಅಂಗಡಿಗಳಲ್ಲಿ ವ್ಯಾಪಾರ ನಡೆಸಲು ಸಿದ್ಧತೆ ನಡೆಸಲಾಗ್ತಿದೆ. ಈಗಾಗಲೇ ಸೇಲಂ ನಗರದಾದ್ಯಂತ ಮೋದಿ ಇಡ್ಲಿ ಪೋಸ್ಟರ್ಗಳು ರಾರಾಜಿಸುತ್ತಿವೆ

ಡಿಸೆಂಬರ್ನಲ್ಲಿ ಸುಧಾರಿಸಲಿದೆ ದೇಶದ ಆರ್ಥಿಕ ನೀತಿ..!
ಕರೊನಾ ಮಹಾಮಾರಿ ದೇಶದ ಜನತೆಯ ಪ್ರಾಣಕ್ಕೆ ಸಂಚಕಾರ ತಂದಿದ್ದು ಮಾತ್ರವಲ್ಲದೇ ಆರ್ಥಿಕ ಸ್ಥಿತಿಯ ಮೇಲೂ ಬರೆ ಎಳೆದಿದೆ. ಈ ಬಾರಿ ಜಿಡಿಪಿ ದರ ದಾಖಲೆಯ ಪ್ರಮಾಣದಲ್ಲಿ ಅಂದ್ರೆ ಶೇ.23.69ರಷ್ಟು ಕುಸಿತ ಕಂಡಿರೋದು ಕಳವಳಕ್ಕೆ ಕಾರಣವಾಗಿದೆ. ಆದ್ರೆ ಸೆಪ್ಟೆಂಬರ್ ಡಿಸೆಂಬರ್ ತ್ರೈಮಾಸಿಕದ ವೇಳೆಯಷ್ಟರಲ್ಲಿ ದೇಶದ ಜಿಡಿಪಿ ದರ ಏರಿಕೆ ಕಾಣಲಿದೆ ಅಂತಾ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಹ್ಮಣ್ಯನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ 40 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೇಶದ ಜಿಡಿಪಿ ದರ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಹೀಗಾಗಿ ಈ ಸಂಬಂಧ ಪ್ರತಿಕ್ರಯಿಸಿದ ಕೆ.ವಿ.ಸುಬ್ರಹ್ಮಣ್ಯನ್ ,ಕರೊನಾ ಕಾರಣದಿಂದಾಗಿ ದೇಶದಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸಲಾಗಿತ್ತು.ಇದು ಜಿಡಿಪಿ ದರ ಕುಸಿತಕ್ಕೆ ಮುಖ್ಯ ಕಾರಣವಾಗಿದೆ.ಆದ್ರೀಗ ದೇಶದಲ್ಲಿ ಅನ್ಲಾಕ್ ಪ್ರಕ್ರಿಯೆ ಮುಂದುವರೆದಿದ್ದು ವ್ಯಾಪಾರ – ವ್ಯವಹಾರ ಚೇತರಿಕೆ ಕಾಣುತ್ತಿವೆ ಅಂತಾ ಹೇಳಿದ್ದಾರೆ.

ಟೀಂನಿಂದ ಹೊರ ನಡೆದ ಆರ್ಸಿಬಿ ಸ್ಟಾರ್ ಆಟಗಾರ..!
ಸಿಎಸ್ಕೆ ಟೀಂನಿಂದ ಸುರೇಶ್ ರೈನಾ ಹೊರಬಂದ ಬೆನ್ನಲ್ಲೇ ಇದೀಗ ಆರ್ಸಿಬಿ ತಂಡಕ್ಕೆ ಇದೀಗ ಹೊಸ ಆಘಾತ ಎದುರಾಗಿದೆ. ಐಪಿಎಲ್ ಟೂರ್ನಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ವಿರಾಟ್ ಪಾಳಯದ ಸ್ಟಾರ್ ಬೌಲರ್ ಕೇನ್ ರಿಚರ್ಡ್ಸನ್ ತಂಡದಿಂದ ಹೊರನಡೆದಿದ್ದಾರೆ. ಇನ್ನುಈ ಸಂಬಂಧ ಟ್ವೀಟ್ ಮಾಡಿರೋ ಆರ್ಸಿಬಿ, ಕೇನ್ ತಂದೆಯಾಗುವ ಖುಶಿಯಲ್ಲಿದ್ದು, ಹೀಗಾಗಿ ಕುಟುಂಬದ ಜೊತೆ ಸಮಯ ಕಳೆಯಲು ನಿರ್ಧರಿಸಿರುವ ಕೇನ್ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದೆ. ಇನ್ನು ಕೇನ್ ಜಾಗಕ್ಕೆ ಆಸ್ಟ್ರೇಲಿಯಾದ ಲೆಗ್ ಸ್ಪಿನರ್ ಆಡಮ್ ಜಂಪಾ ಎಂಟ್ರಿ ಕೊಟ್ಟಿದ್ದಾರೆ.

ದಿನಕ್ಕೆ 13 ಬಾರಿ ಕದನ ವಿರಾಮ ಉಲ್ಲಂಘಿಸುತ್ತಂತೆ ಪಾಪಿ ಪಾಕ್..!

ಗಡಿಯಲ್ಲಿ ಪಾಕಿಸ್ತಾನ ತನ್ನ ಮೊಂಡು ಬುದ್ಧಿಯನ್ನ ಪ್ರದರ್ಶಿಸುತ್ತಿರೋದು ಹೊಸದೇನಲ್ಲ.ಪದೇ ಪದೇ ಒಂದಿಲ್ಲೊಂದು ಕ್ಯಾತೆ ತೆಗೆಯೋ ಪಾಪಿ ಪಾಕ್​ ಕಣಿವೆ ರಾಜ್ಯದ ಗಡಿಯಲ್ಲಿ ಒಂದಿಲ್ಲೊಂದು ಕುತಂತ್ರವನ್ನ ಮಾಡುತ್ತಲೇ ಬಂದಿದೆ. ಇದೀಗ ಆರ್​ಟಿಐ ನಡೆಸಿರೋ ಸಮೀಕ್ಷೆಯೊಂದರ ಪ್ರಕಾರ ಕಳೆದ 7 ತಿಂಗಳಲ್ಲಿ ಪಾಕ್​ ಸೇನೆ ಪ್ರತಿ ದಿನ 13 ಬಾರಿ ಗಡಿ ರೇಖೆ ಉಲ್ಲಂಘನೆಗೆ ಯತ್ನಿಸಿದೆ ಎನ್ನಲಾಗಿದೆ.

ಆರ್​ಟಿಐ ಕಾರ್ಯಕರ್ತ ರಮಣ್ ಶರ್ಮಾ ಎಂಬವರು ನಡೆಸಿದ ಸಮೀಕ್ಷೆಯ ಪ್ರಕಾರ ಕಳೆದ 2 ವರ್ಷ 7 ತಿಂಗಳಲ್ಲಿ ಪಾಕಿಸ್ತಾನ ಕಡೆಯಿಂದ 8,571 ಬಾರಿ ಕದನ ವಿರಾಮ ಉಲ್ಲಂಘನೆಯಾಗಿದೆ. ಇದರನ್ವಯ 57 ಸೈನಿಕರು ಸೇರಿದಂತೆ 116 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೂ 608 ಮಂದಿ ಗಾಯಗೊಂಡಿದ್ದಾರೆ.

ಅಲ್ಲದೇ ಕೇವಲ ಇದೊಂದು ವರ್ಷದಲ್ಲಿ ಪಾಕ್​ ಸೇನೆ 2952 ಬಾರಿ ಗಡಿ ದಾಟಲು ಯತ್ನಿಸಿದ್ದರ ಪರಿಣಾಮ ನಡೆದ ಸಂಘರ್ಷದಲ್ಲಿ 6 ಸೈನಿಕರು ಸೇರಿದಂತೆ 16 ಮಂದಿ ನಾಗರಿಕರು ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

- Advertisement -

Latest Posts

Don't Miss