ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ಭರದಿಂದ ಸಾಗಿದ್ದು, ಮೊದಲ ಹಂತದ ಚುನಾವಣೆ ಮುಗಿದಿದೆ. ಎರಡನೇ ಹಂತದ ಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ. ಸೌರಾಷ್ಟ್ರ ಕಚ್ ಪ್ರದೇಶದ 19 ಜಿಲ್ಲೆಗಳು ಮತ್ತು ರಾಜ್ಯದ ದಕ್ಷಿಣ ಭಾಗಗಳಲ್ಲಿ ಗುರುವಾರ ಒಟ್ಟು 182 ಸ್ಥಾನಗಳ ಪೈಕಿ 89 ಸ್ಥಾನಕ್ಕೆ ಮತದಾನ ನಡೆದಿದ್ದು, ಮೊದಲ ಹಂತದ ಮತದಾನದಲ್ಲಿ ಸರಿಸುಮಾರು 60.20 ರಷ್ಟು ಮತದಾನವಾಗಿದೆ.
ಅಫ್ಘಾನಿಸ್ತಾನದ ಶಾಲೆಯೊಂದರಲ್ಲಿ ಬಾಂಬ್ ಸ್ಪೋಟ, 10ಕ್ಕೂ ಹೆಚ್ಚು ಮಕ್ಕಳು ಸಾವು..
ಇನ್ನು ಎರಡನೇ ಹಂತದ ಚುನಾವಣೆಗೆ ಸಿದ್ಧತೆ ನಡೆಸಿರುವ ಪ್ರಧಾನಿ ಮೋದಿ ಅವರು ಇಂದು ಅಹಮದಾಬಾದ್ ನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬಿಜೆಪಿ ಪ್ರಕಾರ ಮೋದಿಯವರು ಇಂದು ನರೋಡಾ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯ ನರೋದಾ ಗಾಮ್ ಮತ್ತು ನರೋಡಾ ಪಾಟಿಯಾದಿಂದ ರ್ಯಾಲಿಯನ್ನು ಪ್ರಾರಂಭಿಸುತ್ತಾರೆ. ರಸ್ತೆ ಮಾರ್ಗವಾಗಿ ಮೋದಿಯವರಿ 35 ಸ್ಥಳಗಳಿಗೆ ಭೇಟಿ ನೀಡಲಿದ್ದಾರೆಂದು ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದೆ. ರೋಡ್ ಶೋ ಮಧ್ಯಾಹ್ನ ಪ್ರಾರಂಭವಾಗಿಸಂಜೆ 6.30 ರ ವೇಳೆಗೆ ಕೊನೆಗೊಳ್ಳಲಿದೆ. ನರೋಡಾ, ಥಕ್ಕರ್,ಬಾಪನಗರ, ಬಾಪುನಗರ, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್ಪುರ್ ಖಾಡಿಯಾ, ಎಲಿಸ್ ಬ್ರಿಡ್ಜ್, ವೆಜಾಲ್ಪುರ, ಘಟ್ಲೋಡಿಯಾ, ನಾರಣಪುರ, ಸಬರಮತಿ ಮತ್ತು ಗಾಂಧಿನಗರ ದಕ್ಷಿಣದಲ್ಲಿ ರೋಡ್ ಶೋ ನಡೆಯಲಿದೆ.
ನಗರಸಭೆ ಆಡಳಿತದ ವಿರುದ್ಧ ನಗರಸಭೆಯ ಜೆಡಿಎಸ್ ಸದಸ್ಯರಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ..