ಬೆಂಗಳೂರು: ಕರ್ನಾಟಕ ಡಬಲ್ ಇಂಜಿನ್ ಶಕ್ತಿಯಲ್ಲಿ ನಡೆಯುತ್ತಿದೆ. ಭಾರತ ಇನ್ನು ಕುಂಟುವುದಿಲ್ಲ, ವೇಗವಾಗಿ ಓಡುತ್ತದೆ. ಬೆಂಗಳೂರಿನ ಕನಸನ್ನು ನಮ್ಮ ಸರ್ಕಾರ ನನಸು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇಂಪೆಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆಗೈದ ಸಿದ್ಧರಾಮಯ್ಯ
ಕರ್ನಾಟಕದ ಜನತೆಗೆ ಕೋಟಿ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಕನ್ನಡದಲ್ಲಿ ಭಾಷಣ ಶುರುಮಾಡಿದರು. ಕರ್ನಾಟಕದಿಂದ ದೇಶಕ್ಕೆ ಅನೇಕ ಕೊಡುಗೆ ಸಿಕ್ಕಿದೆ. ಕನ್ನಡ ನೆಲದ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯ.
ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ
ರೈಲ್ವೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳಾಗಿದ್ದು, ಅತ್ಯಾಧುನಿಕ ರೈಲುಗಳು ಬರುತ್ತಿವೆ. ಭಾರತದಾದ್ಯಂತ ವಂದೇ ಭಾರತ್ ರೈಲು ಸಂಚರಿಸಲಿದ್ದು, ಸಾರಿಗೆಯನ್ನು ನಾವು ಸುಧಾರಿಸಿ ಸಮಯವನ್ನು ಉಳಿಸುತ್ತೇವೆ. ಹೊಸ ಪ್ರದೇಶಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ಇನ್ನು ರೈಲು ನಿಲ್ದಾಣಗಳು ಆಧುನೀಕರಣಗೊಳಿಸಲಾಗಿದೆ.
ಕುಲ ಕುಲ ಎಂದು ಹೊಡದಾಡದಿರಿ, ಜಾತಿ ಆಧಾರದ ಮೇಲೆ ಭೇಧ ಭಾವ ಮಾಡಬೇಡಿ ಎಂದು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ ಎಂದರು. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೇರೇಯ ಅನುಭವ ಕೊಡುತ್ತದೆ. ದೇಶದ ಬೇರೆ ರೈಲು ನಿಲ್ದಾಣಗಳನ್ನು ಇದೇ ತರ ಆಧುನೀಕರಣ ಮಾಡುತ್ತೇವೆ.
ಕರ್ನಾಟಕ್ಕಕೆ ಇದೇ ಮೊದಲ ಬಾರಿ ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲು ಸಿಕ್ಕಿದೆ. ಕರ್ನಾಟಕಕ್ಕೆ ನಾವು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಭಾರತದ ಭವಿಷ್ಯಕ್ಕೆ ಸ್ಟಾರ್ಟ್ ಅಪ್ ಮುಖ್ಯ ಅದಕ್ಕೆ ಬೆಂಗಳೂರು ಬಹುದೊಡ್ಡ ಕೊಡುಗೆ ನೀಡಿದೆ. ಕೇಂಪೆಗೌಡರ ಚಿಂತನೆಗಳು ಭವಿಷ್ಯದ ಕರ್ನಾಟಕ ಹೇಗಿರಬೇಕೆಂದು ಪ್ರೇರಣೆ ನೀಡುತ್ತದೆ.
ಬೆಂಗಳೂರು ಇಂದು ಜಾಗತಿಕವಾಗಿ ಬೆಳೆದಿದೆ. ನಾಡಪ್ರಭು ಕೆಂಪೇಗೌಡರ ಕಲ್ಪನೆಯಂತೆ ಬೆಂಗಳೂರನ್ನು ಅಭಿವೃದ್ಧಿ ಪಡಿಸುತ್ತೇವೆ. ಬೆಂಗಳೂರಿನ ಪರಂಪರೆ ಸಂರಕ್ಷಿಸುವ ಜೊತೆಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಬೇಕು ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿರುತ್ತೆ ಎಂದು ಪ್ರಧಾನಿ ಮೋದಿ ಹೇಳಿದರು.
ಹೊಸದಾಗಿ ನಿರ್ಮಾಣವಾಗಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟಿಸಿದ ಪ್ರಧಾನಿ ಮೋದಿ